ಮೈಸೂರು

ಹಿತ್ತಾಳೆ ಸೈಜರ್, ಅಲ್ಯೂಮಿನಿಯಂ ಕ್ಲಾಂಪ್ ಕಳುವು : ದೂರು

ಮೈಸೂರು,ಅ.28:- ಕಂಪನಿಯೊಂದರ ಪ್ರೊಡಕ್ಷನ್ ರೂಮ್ ನಲ್ಲಿರಿಸಲಾಗಿದ್ದ  ಹಿತ್ತಾಳೆ ಸೈಜರ್, ಅಲ್ಯೂಮಿನಿಯಂ ಕ್ಲಾಂಪ್ ಕಳುವಾಗಿದೆ ಎಂದು ಜನರಲ್ ಮ್ಯಾನೇಜರ್ ಓರ್ವರು ದೂರು ನೀಡಿದ್ದಾರೆ.

ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಜನರಲ್ ಮ್ಯಾನೇಜರ್ ಹರಿ ಪ್ರಸನ್ನ ಎಂಬವರು ದೂರು ನೀಡಿದ್ದು,  ತಾವು ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು,  17.10.19 ರಂದು ಬೆಳಿಗ್ಗೆ 9.30 ಕ್ಕೆ ಪರಿಶೀಲನೆ ವೇಳೆಯಲ್ಲಿ ನಮ್ಮ ಕಂಪನಿಯ ಪ್ರೊಡಕ್ಷನ್ ರೂಮಿನಲ್ಲಿ  ಇಟ್ಟಿದ್ದ 07 ಪೈಪ್ ತಯಾರು ಮಾಡುವ ಹಿತ್ತಾಳೆ ಸೈಜರ್ ಗಳು ಮತ್ತು 01 ಅಲ್ಯೂ,ಮಿನಿಯಂ ಕ್ಲಾಂಫ್ ಕಳವಾಗಿದ್ದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: