ಮೈಸೂರು

ವಿ.ವಿ.ಮೊಹಲ್ಲಾದ 2ನೇ ಮುಖ್ಯರಸ್ತೆಯಲ್ಲಿ ಚರಂಡಿ ನೀರು ನಿಲ್ಲದೇ ಇರುವ ಹಾಗೆ ನೋಡಿಕೊಳ್ಳಲು ಒತ್ತಾಯ

ಮೈಸೂರು, ಅ.28:- ನಗರದ ವಿ.ವಿ.ಮೊಹಲ್ಲಾದ 2ನೇ ಮುಖ್ಯರಸ್ತೆ (ಬಾಟಾ ಶೋರೂಂ ಕೆಳಗೆ)ಯಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೇ ಹಾಗೆಯೇ ಕಳೆದ ಒಂದು ವಾರದಿಂದ ನಿಂತುಕೊಂಡಿದೆ. ಸ್ಥಳೀಯ ನಿವಾಸಿಗಳು ನಗರಪಾಲಿಕೆ ಆರೋಗ್ಯ ಇಲಾಖೆಗೆ ದೂರು ನೀಡಿದರೆ ಅವರು ತಾತ್ಕಾಲಿಕವಾಗಿ ಬಂದು ನೀರು ಹರಿದು ಹೋಗುವ ಹಾಗೆ ಮಾಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಪುನಃ ಚರಂಡಿ ನೀರು ಹಾಗೆಯೇ ನಿಂತಿರುತ್ತದೆ. ಅದಕ್ಕಾಗಿ ನೀರು ಶೇಖರವಾಗದಂತೆ, ಹರಿದು ಹೋಗುವಂತೆ ಶಾಸ್ವತ ವ್ಯವಸ್ಥೆ ಕಲ್ಪಿಸಬೇಕೆಂದು ಸಮಾಜ ಸೇವಕ ಜಿ.ಪಿ.ಹರೀಶ್‍ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ರಸ್ತೆಯಲ್ಲಿ   ಪ್ರೌಢಶಾಲೆಯೊಂದು ಇರುವುದರಿಂದ ಹೆಚ್ಚಿನ ಅಂಶ ಶಾಲಾ ಮಕ್ಕಳು ಈ ರಸ್ತೆಯಲ್ಲಿ ತಿರುಗಾಡುತ್ತಾರೆ. ಆ ನೀರು ಪಾಚಿ ಕಟ್ಟಿ, ಸೊಳ್ಳೆಗಳು ಹರಡಿ ಡೆಂಗ್ಯೂ ಅಥವಾ ಮಲೇರಿಯಾ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ನಗರಪಾಲಿಕೆ ಆರೋಗ್ಯಾಧಿಕಾರಿಯವರಿಗೆ ಆಗ್ರಹಿಸಿದ್ದಾರೆ.

ಚರಂಡಿ ಪಕ್ಕದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ನಗರಪಾಲಿಕೆಯವರು ಮನೆಯ ಮಾಲೀಕರಿಗೆ ಚರಂಡಿಯಲ್ಲಿ ಯಾವುದೇ ತರವಾದ ಕಸ, ಕಡ್ಡಿ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ನೋಟೀಸ್ ಜಾರಿಗೊಳಿಸಬೇಕು. ಕಸ, ಕಡ್ಡಿ ಹಾಕುವುದರಿಂದ ಸಹಜವಾಗಿ ಚರಂಡಿ ಮುಚ್ಚಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವುದಿಲ್ಲ.ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಹೊಣೆ, ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: