ದೇಶಪ್ರಮುಖ ಸುದ್ದಿ

ವಾಯುಮಾರ್ಗ ನಿರ್ಬಂಧ: ಪಾಕ್ ನ ನಡೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಶ್ನಿಸಲಿರುವ ಭಾರತ

ನವದೆಹಲಿ,ಅ.28-ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನಕ್ಕೆ ಪಾಕಿಸ್ತಾನದ ಮೇಲೆ ವಾಯುಮಾರ್ಗ ಬಳಸಲು ನಿರಾಕರಿಸಲಾಗಿತ್ತು. ಪಾಕ್ ನ ಈ ನಡೆಯನ್ನು ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ ( ಐಸಿಎಒ) ಮುಂದೆ ಭಾರತ ಪ್ರಶ್ನೆ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿಯವರು ಸೌದಿ ಅರೇಬಿಯಾಕ್ಕೆ ಹೊರಡುವ ನಿಟ್ಟಿನಲ್ಲಿ ಭಾರತ ಪಾಕ್ ವಾಯುಪ್ರದೇಶವನ್ನು ಬಳಸಲು ಅನುಮತಿ ಕೋರಿತ್ತು. ಭಾರತದ ಮನವಿಯನ್ನು ತಿರಸ್ಕರಿಸಿದ ಪಾಕಿಸ್ತಾನ ತನ್ನ ವಾಯುಮಾರ್ಗದ ಮೇಲೆ ಮೋದಿ ವಿಶೇಷ ವಿಮಾನಕ್ಕೆ ಭಾನುವಾರ ನಿರ್ಬಂಧ ಹೇರಿತ್ತು.

ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ ನೀಡಿರುವ ಮಾರ್ಗಸೂಚಿಯಂತೆ ಇತರೆ ದೇಶಗಳು ಯಾವುದೇ ದೇಶದ ಮೇಲೆ ವಾಯುಮಾರ್ಗವನ್ನು ಬಳಸಲು ಅನುಮತಿ ಕೇಳಬಹುದು ಮತ್ತು ಅನುಮತಿ ನೀಡಬಹುದಾಗಿದೆ. ಆದರೆ, ಪಾಕಿಸ್ತಾನ ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದಂತಾಗಿದ್ದು ಭಾರತವು ಪ್ರಶ್ನೆ ಮಾಡಲಿದೆ.

ಪಾಕಿಸ್ತಾನ ವಾಯುಮಾರ್ಗದ ಮೇಲೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಮುಂಬೈ ಮೂಲಕ ಅರೇಬಿಯನ್‌ ಸಮುದ್ರವನ್ನು ದಾಟಿ ರಿಯಾದ್‌ಗೆ ಪ್ರಯಾಣ ಬೆಳೆಸಬೇಕಿದೆ. ಬೋಯಿಂಗ್‌ 747 ವಿಮಾನದಲ್ಲಿ ಪ್ರಧಾನಿ ಮೋದಿ ಸೌದಿಗೆ ತೆರಳಲಿದ್ದಾರೆ.

ರಿಯಾದ್‌ನಲ್ಲಿ ಪ್ರಧಾನಿ ಮೋದಿ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮನ್‌ ಅಲ್‌ ಸೌದ್‌ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ. ಸೌದಿ ಅರೇಬಿಯಾದ ಸಾವರಿನ್‌ ವೆಲ್ತ್‌ ಫಂಡ್‌ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭವಿಷ್ಯದ ಹೂಡಿಕೆಗಳ ಬಗ್ಗೆ ಪಿಎಂ ಮೋದಿ ಮಾತನಾಡಲಿದ್ದಾರೆ. (ಎಂ.ಎನ್)

Leave a Reply

comments

Related Articles

error: