ಸುದ್ದಿ ಸಂಕ್ಷಿಪ್ತ

ಭಾರತ ವಿಕಾಸ ಪರಿಷದ್‍ನಿಂದ ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ

ಭಾರತ ವಿಕಾಸ ಪರಿಷದ್‍ನಿಂದ ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ

ಸರ್ಕಾರೇತರ ಸೇವಾ ಸಂಸ್ಥೆಯಾಗಿರುವ ಮೈಸೂರಿನ ಭಾರತ ವಿಕಾಸ ಪರಿಷದ್‍, ಭಾರದ್ವಾಜ ಶಾಖೆ ವತಿಯಿಂದ ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಸಂಭ್ರಮಾಚರಣೆಯ ಅರಿವು-ಮಹತ್ವವನ್ನು ತಿಳಿಸಲು ಮತ್ತು ದಸರಾ ಬೊಂಬೆ ಪ್ರದರ್ಶನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ತಿಳಿಸುವ ಉದ್ದೇಶದಿಂದ ಬೊಂಬೆ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿದ್ದು, ತೀರ್ಪುಗಾರರು ಮನೆಮನೆಗೆ ಬಂದು ಬೊಂಬೆ ಪ್ರದರ್ಶನ ವೀಕ್ಷಿಸಲಿದ್ದಾರೆ. ಆಸಕ್ತರು 100 ರೂ ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬಹುದು.

ಸ್ಪರ್ಧೆಯ ನಿಯಮಾವಳಿಗಳು ಇಂತಿವೆ:

 • ಬೊಂಬೆಗಳ ಜೋಡಣೆಗೆ ಮೂರು ವಿಭಾಗಗಳಲ್ಲಿ ಪರಿಗಣಿಸಲಾವುದು. 5 ಹಂತಕ್ಕಿಂತ ಮೇಲ್ಪಟ್ಟು, 4 ರಿಂದ 5 ಹಂತಗಳವರೆಗೆ, ಕನಿಷ್ಟ 3 ಹಂತಗಳಲ್ಲಿ ಬೊಂಬೆ ಜೋಡಿಸಬೇಕು.
 • ಸಾಂಪ್ರದಾಯಿಕ ಬೊಂಬೆ, ರಾಜ ರಾಣಿ ಹಾಗೂ ಕಲಶ ಕಡ್ಡಾಯ.
 • ಕರಕುಶಲ ವಸ್ತು/ವಿನ್ಯಾಸದ ಬೊಂಬೆಗಳನ್ನೇ ಜೋಡಿಸಬೇಕು.
 • ಸಾಂಪ್ರದಾಯಿಕ ಎಣ್ಣೆ ದೀಪ ಉರಿಸಬೇಕು.
 • ಐತಿಹಾಸಿಕ, ಚಾರಿತ್ರಿಕ, ಅಧ್ಯಾತ್ಮಿಕ ಬೊಂಬೆಗಳ ಜೋಡಣೆ ಅವಶ್ಯಕ.
 • ಪರಿಸರ ಮಾಲಿನ್ಯಕ್ಕೆ ತಡೆ, ಸ್ಚಚ್ಛ ಭಾರತ, ಜಲಸಂಪತ್ತು ಸಂರಕ್ಷಣೆ, ಗ್ರಾಮ-ನಗರಗಳಲ್ಲಿ ಹಸಿರೀಕರಣದಂತಹ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸುವ ವಿಭಾಗವಿದ್ದರೆ ಒಳ್ಳೆಯದು.
 • ಸಂಸ್ಕಾರ ಪ್ರಧಾನ ಸನ್ನಿವೇಶದ ಬೊಂಬೆಗಳಿದ್ದರೆ ಒಳ್ಳೆಯದು.
 • ರಾಮಾಯಣ ಮಹಾಭಾರತ, ಭಗವದ್ಗೀತೆ ಹಾಗೂ ಗ್ರಾಮೀಣ ಸಾಂಪ್ರದಾಯಿಕ ಬೊಂಬೆಗಳು.
 • ರಂಗೋಲಿಯಲ್ಲಿ ವಿಶೇಷತೆ ಹಾಗೂ ವೈವಿಧ್ಯತೆಯೂ ಇದ್ದರೆ ಚೆನ್ನ.
 • ಕನಿಷ್ಠ 4 ಅಡಿ ಅಗಲ ಹಾಗೂ 4.5 ಅಡಿ ಎತ್ತರಕ್ಕೆ ಪ್ರಾಧಾನ್ಯತೆ ಇರಲಿ.
 • ವಿದ್ಯುತ್ ದೀಪಗಳು (ಸೀರಿಯಲ್ ಸೆಟ್) ಕಡಿಮೆ ಇರಲಿ.

 

ಪ್ರವೇಶಪತ್ರಗಳು ದೊರೆಯುವ ಸ್ಥಳಗಳು: (1) ಬೊಂಬೆ ಮನೆ ಪ್ರತಿಮಾ ಗ್ಯಾಲರಿ, ನಜ಼ರ್‍ಬಾದ್‍, ಮೈಸೂರು, ದೂರವಾಣಿ ಸಂಖ್ಯೆ: 2445220; (2) ಶ್ರೀನಿಧಿ ಬಾಹುಸಾರ್, ನಂ.48, ರಾಮರಾಜ ಷೋರೂಂ ಎದುರು, ಡಿ. ದೇವರಾಜ ಅರಸ್ ರಸ್ತೆ, ಮೈಸೂರು, ಮೊಬೈಲ್ ಸಂಖ್ಯೆ 9886728816; (3) ಶ್ರೀಮತಿ ಸುಮನಾ ರಘುನಂದನ್, 71, ‘ಸಿ’ ಬ್ಲಾಕ್, ಆನಂದನಗರ (ನಿವೇದಿತ ನಗರ, ಸುಬ್ಬರಾವ್‍ ಪಾರ್ಕ್‍ ಹತ್ತಿರ) ಮೈಸೂರು, ಮೊಬೈಲ್ 9448933209, (4) ಶ್ರೀಮತಿ ಕೌಸಲ್ಯ ಎಂ.ಎಸ್. ನಂ. 472, 4ನೇ ಕ್ರಾಸ್, 2ನೇ ಮುಖ್ಯರಸ್ತೆ, 2ನೇ ಹಂತ, ಎಂ ಬ್ಲಾಕ್, ಕುವೆಂಪುನಗರ.

ಅಕ್ಟೋಬರ್ ತಿಂಗಳ 5, 6, 7 ಮತ್ತು 8ನೇ ತಾರೀಖುಗಳಂದು ತೀರ್ಪುಗಾರರು ಮನೆಗಳಿಗೆ ಭೇಟಿ ನೀಡಿ ಬೊಂಬೆ ಪ್ರದರ್ಶನದ ಮೌಲ್ಯಮಾಪನ ಮಾಡಲಿದ್ದಾರೆ. ಸಮಿತಯ ತೀರ್ಮಾನವೇ ಅಂತಿಮವಾಗಿರುತ್ತದೆ.

 

ಅಕ್ಟೋಬರ್ 10, ಬುಧವಾರ ಸಂಜೆ 4.30ಕ್ಕೆ ಬೊಂಬೆಮನೆ, ಪ್ರತಿಮಾ ಗ್ಯಾಲರಿ, ನಂಬರ್ 91, ನಜ಼ರ್‍ಬಾದ್‍ ಮುಖ್ಯರಸ್ತೆ, ಮೈಸೂರು. ರಿಲಯನ್ಸ್ ಫ್ರೆಶ್ ಮಳಿಗೆ ಎದುರು ನಡೆಯಲಿದೆ.

 

ಹೆಚ್ಚಿನ ವಿವರಗಳಿಗೆ, ಅಧ್ಯಕ್ಷ ಬಿ.ಎನ್. ರಂಗನಾಥ್‍ ರಾವ್‍ – 9886651596, ಉಪಾಧ್ಯಕ್ಷೆ ಮತ್ತು ಸಂಚಾಲಕಿ ಪ್ರತಿಭಾ ಗುರುರಾಜ – 9243510670 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.

 

Leave a Reply

comments

Related Articles

error: