ಪ್ರಮುಖ ಸುದ್ದಿಮನರಂಜನೆ

ಧೋತಿಯನ್ನುಟ್ಟು ಸುದೀರ್ಘ 25 ಕಿಮೀ ದೂರ ಓಡುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಫಿಟ್​​ನೆಸ್​ ಐಕಾನ್ ನಟ ಮಿಲಿಂದ್​ ಸೋಮನ್​

ದೇಶ(ಮುಂಬೈ)ಅ.28:- : ಫಿಟ್​​ನೆಸ್​ ಐಕಾನ್ ಎಂದೇ ಗುರುತಿಸಿಕೊಂಡಿರುವ  ನಟ ಮಿಲಿಂದ್​ ಸೋಮನ್​ ವಿಭಿನ್ನವಾಗಿ ದೀಪಾವಳಿ ಶುಭಾಶಯ ಕೋರಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ತಾವು ಓಡುತ್ತಿರುವ ಫೋಟೋವೊಂದನ್ನು ಪೋಸ್ಟ್​ ಮಾಡಿ ದೀಪಾವಳಿಗೆ ಶುಭಹಾರೈಸಿದ್ದಾರೆ. ಹಬ್ಬದ ಸಂಪ್ರದಾಯದಂತೆ ಧೋತಿಯನ್ನು ಉಟ್ಟು ರನ್ನಿಂಗ್​ನಲ್ಲಿ ತೊಡಗಿಕೊಂಡಿರುವ ಫೋಟೋ  ಒಂದನ್ನು  ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಅವರು, ಜಗತ್ತಿನಲ್ಲಿರುವ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು, ನಾನು ಧರಿಸಿರುವ ಧೋತಿ ನನ್ನ ಓಟಕ್ಕೆ ಸಹಕರಿಸುತ್ತಿಲ್ಲ. ಆದರೆ ಅದಕ್ಕೆ ನನ್ನನ್ನು ತಡೆಯಲು ಸಾಧ್ಯವಿಲ್ಲ. ಧೋತಿಯನ್ನುಟ್ಟು ಸುದೀರ್ಘ 25 ಕಿಮೀ ದೂರ ಓಡಿದ್ದೇನೆ. ನಿಮ್ಮನ್ನು ತಡೆಯಲು ಯಾರಿಗೂ, ಯಾವುದಕ್ಕೂ ಅವಕಾಶ ಕೊಡಬೇಡಿ ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಮಿಲಿಂದ್ ಅವರ ಈ ಫೋಟೋವನ್ನು ನೆಟ್ಟಿಗರು  ಮೆಚ್ಚಿಕೊಂಡಿದ್ದು, ಯಂಗ್​ ಮ್ಯಾನ್​ ಎಂದು ಹೊಗಳಿದ್ದಾರೆ. ಅಲ್ಲದೆ, ಫಿಟ್​ನೆಸ್​ ಜತೆ  ಸಂಪ್ರದಾಯವನ್ನೂ ಎತ್ತಿ ತೋರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: