ಪ್ರಮುಖ ಸುದ್ದಿ

ಸೋಯಾ ತೈಲ ಖಾರ್ಖಾನೆಗೆ ಬೆಂಕಿ : ಭಾರೀ ನಷ್ಟ ಶಂಕೆ

ದೇಶ(ಮಧ್ಯಪ್ರದೇಶ)ಅ.28:- ನೀಮಚ್ ನಗರದ ಸಮೀಪವಿರುವ ಕನಾವಟಿ ಗ್ರಾಮದ ಸೋಯಾ ತೈಲ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ನಗರದಿಂದ 4 ಕಿಲೋಮೀಟರ್ ದೂರದಲ್ಲಿ ಸೋಯಾಬೀನ್ ತೈಲ ಕಾರ್ಖಾನೆ ಇದ್ದು,  ಕಾರ್ಖಾನೆಯಲ್ಲಿ ನಿನ್ನೆ  ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪಟಾಕಿ ಸಿಡಿಸಿ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳದವರು   ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ  ಕಾರಣ ಮತ್ತು ಹಾನಿಯ ಪ್ರಮಾಣ ತಿಳಿದು ಬಂದಿಲ್ಲ.  ತನಿಖೆಯ ನಂತರವೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಘಟನೆಯ ನಂತರ ಜನಸಮೂಹವು ಕಾರ್ಖಾನೆಯ ಸುತ್ತಲೂ ಸೇರಿದ್ದು, ಅಲ್ಲಿನ ಜನರು ಕೂಡಲೇ ಘಟನೆಯನ್ನು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ವರದಿ ಮಾಡಿದರು. ಇದರ ನಂತರ, ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ತಲುಪಿತು.  ಅವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ತೈಲದಿಂದಾಗಿ ಬೆಂಕಿ ವೇಗವಾಗಿ ಹರಡಿತಲ್ಲದೇ ಇಡೀ ಕಾರ್ಖಾನೆಯನ್ನು ಆವರಿಸಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: