ಮೈಸೂರು

ಫೆಲಿಕಾನ್ ಗಳ  ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ : ಡಿಸಿಎಫ್‌ ಪ್ರಶಾಂತ್‌ಕುಮಾರ್‌

ಮೈಸೂರು, ಅ.30:-  ಕುಕ್ಕರಹಳ್ಳಿ ಕೆರೆಯಲ್ಲಿ ಇತ್ತೀಚೆಗೆ ಎರಡು   ಪೆಲಿಕಾನ್‌ ಪಕ್ಷಿಗಳು ಸಾವನ್ನಪ್ಪಿದ್ದು,  ಸಾವಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ದೊರೆತಿದ್ದು, ಫೆಲಿಕಾನ್ ಗಳ  ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ  ಎಂದು ಡಿಸಿಎಫ್‌ ಪ್ರಶಾಂತ್‌ಕುಮಾರ್‌ ತಿಳಿಸಿದ್ದಾರೆ.

ಕುಕ್ಕರಹಳ್ಳಿ ಕೆರೆಯ ಪ್ರವೇಶದ್ವಾರದಲ್ಲಿ ಅ.25ರಂದು ಸ್ಪಾಟ್‌ ಬಿಲ್ಡ್‌ ಫೆಲಿಕಾನ್‌ ಎಂಬ ಪಕ್ಷಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಬಳಿಕ ಮೂರು ದಿನದ ನಂತರ ಮತ್ತೊಂದು ಹಕ್ಕಿಯೂ ಸಾವನ್ನಪ್ಪಿತ್ತು. . ಹೀಗಾಗಿ  ನಾಗರೀಕರಲ್ಲಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮೇಲಿಂದ ಮೇಲೆ ಪೆಲಿಕಾನ್‌ ಪಕ್ಷಿಗಳು ಸಾವಿಗೀಡಾಗುತ್ತಿರುವುದರಿಂದ ಇದು ಹಕ್ಕಿ ಜ್ವರವಿರಬಹುದೇ ಎಂಬ ಆತಂಕ ಮನೆ ಮಾಡಿತ್ತು.

ಬೆಂಗಳೂರಿನ ಇನ್‌ಸ್ಪಿಟ್ಯೂಟ್‌ ಆಫ್‌ ಎನಿಮಲ್‌ ಹೆಲ್ತ್‌ ಅಂಡ್‌ ವೆಟರ್ನರಿ ಬಯಾಲಜಿಕಲ್ಸ್‌ ಎಂಬ ಪ್ರಯೋಗಾಲಯದ ತಜ್ಞರು ನೀಡಿರುವ ಪ್ರಾಥಮಿಕ ವರದಿಯಲ್ಲಿಹಕ್ಕಿಗಳ ಸಾವಿಗೆ ಹಕ್ಕಿಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳು ಕಾರಣವಲ್ಲ ಎಂದು ದೃಢಪಡಿಸಿದ್ದು, ನಾಗರೀಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: