ಮೈಸೂರು

ದೀಪಾವಳಿ ಹಬ್ಬದ ಪ್ರಯುಕ್ತ  ಸರಗೂರು ಪಟ್ಟಣದಲ್ಲಿ ಎತ್ತಿನಗಾಡಿ ಓಟ

ಮೈಸೂರು,ಅ.30:-  ದೀಪಾವಳಿ ಹಬ್ಬದ ಪ್ರಯುಕ್ತ  ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಪಟ್ಟಣದಲ್ಲಿ  ನಿನ್ನೆ  ಎತ್ತಿನಗಾಡಿ ಓಟ ನಡೆಸಲಾಗಿದ್ದು, ಎಲ್ಲರ ಗಮನ ಸೆಳೆಯಿತು.

ವಿವಿಧ ಬಣ್ಣ ಹಾಗೂ ಹೂವುಗಳಿಂದ ಎತ್ತುಗಳನ್ನು ಅಲಂಕರಿಸಲಾಗಿತ್ತು. ಇದಕ್ಕೂ ಮುನ್ನ ಎತ್ತಿನ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿಗಾಡಿಗಳು ಸಂಚರಿಸುವ ಮೂಲಕ ಜನರಿಗೆ ಮನರಂಜನೆ ನೀಡಿದವು.

ಪಟ್ಟಣದ 12ನೇವಾರ್ಡ್ ಮೂಡಲಮಠದ ಶಿವರಾತ್ರಿಸ್ವಾಮಿ, ವಿಶ್ವೇಶರಸ್ವಾಮಿ, ಯೋಗೀಶ್ ಕುಮಾರ್, ಮಹೇಶ್ ಕುಮಾರ್ ಸೇರಿದಂತೆ ಹಲವರು ಓಟದಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: