ಮೈಸೂರು

ಚಾಲಕನ ಅಜಾಗರೂಕತೆಯ ಚಾಲನೆ : ಬಸ್ ನಿಲ್ದಾಣಕ್ಕೆ ಲಾರಿ ಡಿಕ್ಕಿ; ಶೆಲ್ಟರ್ ಕುಸಿದು ಓರ್ವ ಸಾವು

ಮೈಸೂರು,ಅ.30:-  ಬಸ್ ನಿಲ್ದಾಣದಲ್ಲಿ  ಕುಳಿತಿದ್ದ ವೇಳೆ  ಮೇಲೆ ಲಾರಿಯೊಂದು ಬಸ್ ನಿಲ್ದಾಣಕ್ಕೆ ಗುದ್ದಿದ್ದು, ಬಸ್ ನಿಲ್ದಾಣದ ಶೆಲ್ಟರ್ ಕುಸಿದು ಬಿದ್ದು,  ಓರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಗೌಡರಹುಂಡಿ ಬಳಿ ಈ ಘಟನೆ ನಡೆದಿದ್ದು, ರಂಗಸ್ವಾಮಿ (25) ಮೃತ ಯುವಕನಾಗಿದ್ದಾನೆ. ರಂಗಸ್ವಾಮಿ ಮೈಸೂರಿನ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆಯಲ್ಲಿ ಪ್ರಸಾದ್ ಮತ್ತು ಕಿರಣ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಯುವಕರು ನಿನ್ನೆ ರಾತ್ರಿ ಊಟ ಮುಗಿಸಿ ಗ್ರಾಮದ ಬಸ್​ ಸ್ಟ್ಯಾಂಡ್​ನಲ್ಲಿ ಕುಳಿತಿದ್ದರು. ಈ ವೇಳೆ ಚಾಲಕನ  ಅಜಾಗರೂಕತೆಯ ಚಾಲನೆಯಿಂದ ಬಸ್​ ಸ್ಟ್ಯಾಂಡ್​ಗೆ ಲಾರಿ ಡಿಕ್ಕಿಯಾಗಿದೆ. ಕೂಡಲೇ ಬಸ್ ಸ್ಟಾಂಡ್ ಶೆಲ್ಟರ್ ಕುಸಿದು ಬಿದ್ದಿದ್ದು ಶೆಲ್ಟರ್ ಅಡಿ ಸಿಲುಕಿದ್ದ ಪ್ರಸಾದ್, ಕಿರಣ್ ಅವರನ್ನು ಗ್ರಾಮಸ್ಥರು ಹೊರಗೆಳೆದಿದ್ದಾರೆ. ರಕ್ಷಣಾ ಕಾರ್ಯದ ವೇಳೆ ರಂಗಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪರಿಹಾರಕ್ಕಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: