ಪ್ರಮುಖ ಸುದ್ದಿಮೈಸೂರು

ನ.2ರಂದು ‘ಕಾಯದ ಹಾಡು’ ನಾಟಕ

ಮೈಸೂರು. ಅ.30: ಬೆಂಗಳೂರಿನ ಮಹಾಯಾನ ಥಿಯೇಟರ್ ವತಿಯಿಂದ “ಕಾಯದ ಹಾಡು” ನಾಟಕ ಪ್ರದರ್ಶನ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹಾಯಾನದ ಕಲಾವಿದ ಶಿವು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿ, ರಂಗಹೆಜ್ಜೆ ಕಲ್ಚರಲ್ ಟ್ರಸ್ಟ್‌, ಮೈಸೂರು. ಚಾಮರಾಜನಗರದ ರಂಗವಾಹಿನಿ ಹಾಗೂ ಇತರರ ಸಹಯೋಗದೊಂದಿಗೆ ನ.2ರ ಸಂಜೆ.6.30ಕ್ಕೆ ಕಲಾಮಂದಿರದ ಕಿರುಮಂದಿರಲ್ಲಿ ಜ.ನಾ.ತೇಜಶ್ರೀಯವರ ‘ಅವನರಿವಲ್ಲಿ’ ಆಧರಿಸಿದ ನಾಟಕವಾದ ಕಾಯದ ಹಾಡನ್ನು ವಿಶೇಷವಾಗಿ ಕಾವ್ಯಾತ್ಮಕವಾಗಿ ಮೂಡಿದ್ದು, ಮಹಾಯಾನದ ಐವರು ಮಹಿಳಾ ಕಲಾವಿದರು ಅಭಿನಯಿಸುತ್ತಿದ್ದಾರೆ. ನಟರಾಜ್ ಹೊನ್ನವಳ್ಳಿಯವರ ನಿರ್ದೇಶನ ಹಾಗೂ ವಿನ್ಯಾಸ. ಭಿನಷಟ್ಜ ಅವರ ಸಂಗೀತ. ಅಮೋಘ್ ಸಿದ್ಧಾರ್ಥ ರಿಂದ ಬೆಳಕಿನ ಸಂಯೋಜನೆ ಇದೆ.

ಕಲಾವಿದರಾದ ಪ್ರವೀಣ್, ಮಂಜುಕಿರಣ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ:ಕೆ.ಎಂ.ಆರ್)

Leave a Reply

comments

Related Articles

error: