ಪ್ರಮುಖ ಸುದ್ದಿಮೈಸೂರು

ನ.10ರಂದು ಕಿಡ್ಡಾಥಾನ್ : ಆಹ್ವಾನ

ಮೈಸೂರು. ಅ.30: ಮೈಸೂರು ಎಲೈಟ್ ರೌಂಡ್ ಟೇಬಲ್ , ಎಲೈಟ್ ಲೇಡಿಸ್ ಸರ್ಕಲ್ ವತಿಯಿಂದ ನಾಲ್ಕನೇ ವರ್ಷದ ಕಿಡ್ಡಾಥಾನ್ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಪವನ್ ಶ್ರಾಫ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಧ ವಿಭಾಗಗಳಿಂದ ನಾಲ್ಕು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು ಸುಮಾರು 2 ರಿಂದ 16 ವರ್ಷಗಳವರೆಗಿನ ಆಸಕ್ತರು ಭಾಗಿಯಾಗಬಹುದು. ನ.10ರ ಬೆಳಗ್ಗೆ 6 ಗಂಟೆಗೆ, ಮೈವಿವಿಯ ಓವಲ್ ಗ್ರೌಂಡ್ಸ್ ನಲ್ಲಿ ಸ್ಪರ್ಧೆ ನಡೆಯಲಿದೆ.  ವಿವರಗಳಿಗೆ, http://mysurukiddathon.com, ಮೊ.ಸಂ 9591925573, 8880060006 ಸಂಪರ್ಕಿಸಬಹುದು.

ಕಾರ್ಯದರ್ಶಿ ದಿನೇಶ್, ಲೇಡಿಸ್ ಸರ್ಕಲ್ ಅಧ್ಯಕ್ಷೆ ದಾಕ್ಷಾಯಿಣಿ, ನಿಕಟ ಪೂರ್ವ ಅಧ್ಯಕ್ಷೆ ಪ್ರಿಯಾಂಕ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ: ಕೆ.ಎಂ.ಆರ್)

Leave a Reply

comments

Related Articles

error: