ಪ್ರಮುಖ ಸುದ್ದಿಮೈಸೂರು

ಕುಲಪತಿ ಡಾ.ವೈ.ಎಸ್.ಸಿದ್ಧೇಗೌಡರ ಅಭಿನಂದನೆ ನಾಳೆ

ಮೈಸೂರು.ಅ.30 : ಮೈಸೂರು ವಿವಿಯ ಸಮಾಜ ಕಾರ್ಯ ಅಧ್ಯಯನ ವಿಭಾಗ ಹಾಗೂ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಭಾಗದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ.ವೈ.ಎಸ್.ಸಿದ್ಧೇಗೌಡರ ಅಭಿನಂದನಾ ಸಮಾರಂಭ ಅಂಗವಾಗಿ ರಾಷ್ಟ್ರಮಟ್ಟ ವಿಚಾರ ಸಂಕಿರಣ, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಚಂದ್ರಮೌಳಿ ತಿಳಿಸಿದರು.

ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸಿದ್ಧೇಗೌಡರ ಅಭಿನಂದನವು ಅ.31ರಂದು ಬೆಳಗ್ಗೆ 7 ಗಂಟೆಗೆ ಗಂಗೋತ್ರಿ ಆವರಣದಲ್ಲಿ 37 ಸಸಿಗಳನ್ನು ನಡೆಸಲಾಗುವುದು, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಭಾಷ್ಯಂ ಸ್ವಾಮೀ ಸಾನಿಧ್ಯ ವಹಿಸುವರು, . ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ಕನ್ನಡ ಹೋರಾಟಗಾರ ಪ.ಮಲ್ಲೇಶ್, ಡಾ.ಬಿಷ್ಣು ಮೋಹನ್ ದಾಸ್ ಇನ್ನಿತರರು ಹಾಜರಿರಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದರು.

ಬೆಳಗ್ಗೆ 10 ಗಂಟೆಗೆ ವಿವಿಯ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ‘ಸಮಾಜ ಕಾರ್ಯ ಶಿಕ್ಷಣ ಮತ್ತು ಆಚರಣೆ’ ವಿಷಯವಾಗಿ ರಾಷ್ಟ್ರೀಯ ವಿಚಾರ ಸಂಕಿರಣ, ಭಾರತೀಯ ಶಿಕ್ಷಣ ಮಂಡಲ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಸಿ ಮುಕುಲ್ ಕಾನಿಟ್ಕರ್ ವಿಷಯ ಮಂಡಿಸುವರು. ಬೆಂಗಳೂರು ಕೇಂದ್ರದ ಸಮಾಜ ಅಧ್ಯಯನ ಅಧ್ಯಕ್ಷರಾದ ಪ್ರೊ.ಎಂ.ಕೆ.ಶ್ರೀಧರ್ ಉದ್ಘಾಟಿಸುವರು. ಹಲವರು ಹಾಜರಿರಲಿದ್ದಾರೆ ಎಂದರು.

ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಿರ್ಮಲನಾಥ ಸ್ವಾಮೀಜಿ, ಸಚಿವರಾದ ಡಾ.ಸಿ.ಅಶ್ವಥ್ ನಾರಾಯಣ ಹಾಗೂ ಇತರರು ಇರಲಿದ್ದಾರೆ. ಡಾ.ವೈ.ಎಸ್.ಎಸ್. ಕುರಿತ ಅಭಿನಂದನಾ ಗ್ರಂಥ ‘ಸವ್ಯಸಾಚಿ’ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ಡಾ.ಹೆಚ್.ಆರ್.ತಿಮ್ಮೇಗೌಡ, ಡಾ.ಕುಮುದಿನಿ, ಡಾ.ಶೀಲಾ ಖರೆ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: