ಪ್ರಮುಖ ಸುದ್ದಿಮೈಸೂರು

ನ.1ರಂದು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಆಗ್ರಹಿಸಿ ದೆಹಲಿ ಚಲೋ

ಮೈಸೂರು,ಅ.30 : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಆಗ್ರಹಿಸಿ ಹಾಗೂ ಕೊಡವರ ನರಮೇಧಕ್ಕೆ ಟಿಪ್ಪುವಿಗೆ ಸಹಕರಿಸಿದ ಕಾರಣಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನ. 1 ರಂದು ದೆಹಲಿ ಚಲೋ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಎಂದು ಅಧ್ಯಕ್ಷ ಎನ್.ಯು, ನಾಚಪ್ಪ ಕೊಡವ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿನ್ನೆಲೆಯಲ್ಲಿ ದೆಹಲಿ ಚಲೋ ಹಾಗೂ ದೆಹಲಿಯಲ್ಲಿನ ಫ್ರಾನ್ಸ್ ರಾಯಭಾರಿ ಕಚೇರಿ ಬಳಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಅಲ್ಲದೆ, ಅಂದು ಮಧ್ಯಾಹ್ನ ದೆಹಲಿಯಲ್ಲೇ ಸಂಸತ್ ಮಾರ್ಗದಲ್ಲಿ ಪ್ರತಿಭಟನೆ ಸಹಾ ನಡೆಯಲಿದೆ ಎಂದು ವಿವರಿಸಿದರು.

ಇದೇ ವೇಳೆ, ಅಲ್ಲಿ ಸಹಾ ಕನ್ನಡ ರಾಜ್ಯೋತ್ಸವ ದಿನವನ್ನು ರಾಜ್ಯ ತಮ್ಮ ವಿರುದ್ಧ ತಾಳಿರುವ ಮಲತಾಯಿ ಧೋರಣೆ ವಿರೋಧಿಸಿ ದುರಾಕ್ರಮಣ ದಿನವೆಂದು ಪರಿಗಣಿಸಿ ಆಕ್ರೋಶ ವ್ಯಕ್ತಪಡಿಸಲಾಗುವುದೆಂದರು.

ಅಲ್ಲದೆ, 1956 ರಲ್ಲಿ ರಾಜ್ಯ ಪುನರ್ವಿಘಟನಾ ಕಾಯ್ದೆ ಅಡಿಯಲ್ಲಿ ಕೊಡವ ಸಂಪ್ರದಾಯದ ನಾಡನ್ನು ಮೈಸೂರಿನಲ್ಲಿ ವಿಲೀನಗೊಳಿಸಲಾಗಿದೆ. ಈ ಬಳಿಕ ರಾಜ್ಯ ಪ್ರಾಯೋಜಿತ ಏಕರೂಪೀಕರಣ ನೆಪದಲ್ಲಿ ಕೊಡವ ಬುಡಕಟ್ಟಿನ ಸಂಸ್ಕೃತಿಯ ಹತ್ಯೆಯಾಗುತ್ತಿದೆ. ಅಲ್ಲದೆ, ಕಾಶ್ಮೀರಕ್ಕೆ ವೈಶಿಷ್ಟ್ಯ ಇದೆ ಎನ್ನುವುದಾದರೆ ಕೊಡಗಿಗೆ ಏಕಿಲ್ಲ ಎಂದು ಪ್ರಶ್ನಿಸಬೇಕಾಗುತ್ತದೆ.

ಕೊಡಗಿನಲ್ಲಿ ಮಾವೋವಾದಿಗಳು ಹಾಗೂ ಅನ್ಯರ ನುಸುಳುವಿಕೆಯಿಂದ ಕೊಡಗಿನ ಅಸ್ತಿತ್ವಕ್ಕೇ ಧಕ್ಕೆ ಬರುತ್ತಿದ್ದು, ತಾವು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿಲ್ಲ, ಬದಲಾಗಿ ಸ್ವಾಯತ್ತತೆ ನೀಡುವ ಮೂಲಕ ಕೊಡಗಿನ ಅಸ್ತಿತ್ವವನ್ನು ಗೌರವಿಸಬೇಕೆಂದು ಆಗ್ರಹಿಸಿದರು.

ಜೊತೆಗೆ, ಟಿಪ್ಪುವಿನೊಡನೆ ಸೇರಿಕೊಂಡು ಕೊಡವರ ನರಮೇಧಕ್ಕೆ ಕಾರಣವಾದ ಅಂದಿನ ಫ್ರಾನ್ಸ್ ಕಾರಣವಾದ ಹಿನ್ನೆಲೆಯಲ್ಲಿ ಈಗಿನ ಫ್ರಾನ್ಸ್ ಸರ್ಕಾರ ಕೊಡವರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿನ ಫ್ರಾನ್ಸ್ ರಾಯಭಾರಿ ಕಚೇರಿ ಎದುರು ಸಹಾ ಪ್ರದರ್ಶನ ನಡೆಸಲಾಗುವುದೆಂದು ಮಾಹಿತಿ ನೀಡಿದರು.

ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಕಿರಿಯಮಾಡ ಶರೀನ್, ಇನ್ನಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: