ಸುದ್ದಿ ಸಂಕ್ಷಿಪ್ತ

ಕಾವೇರಿ: ಸುಪ್ರೀಂ ತೀರ್ಪು ವಿರೋಧಿಸಿ ಬೈಕ್ ರ್ಯಾಲಿ

ಕಾವೇರಿ: ಸುಪ್ರೀಂ ತೀರ್ಪು ವಿರೋಧಿಸಿ ಬೈಕ್ ರ್ಯಾಲಿ

ಕಾವೇರಿ ಜಲವಿವಾದದಲ್ಲಿ ಕರ್ನಾಟಕಕ್ಕೆ ಮಾರಕವಾಗುವಂಥ ಸುಪ್ರೀಂ ಕೋರ್ಟ್‍ ತೀರ್ಪು ವಿರೋಧಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮೈಸೂರು ಜಿಲ್ಲಾ ಮಂಡಳಿ ಮತ್ತು ಎಐಟಿಯುಸಿ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ. ಸೆ. 26 ರ ಬೆಳಗ್ಗೆ 10.30ಕ್ಕೆ ಮೈಸೂರು ನಗರದ ಸರಸ್ವತಿಪುರಂನ ಸಿಪಿಐ ಕಚೇರಿ ಇರುವ ಕೆ.ವಿ. ಭವನದಿಂದ ಮಂಡ್ಯ ನಗರದ ವರೆಗೆ ಬೈಕ್‍ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಆದುದರಿಂದ ಪಕ್ಷದ ಸದಸ್ಯರು ಹಾಗೂ ಎಐಟಿಯುಸಿ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಬೇಕೆಂದು ಸಿಪಿಐ ಕಾರ್ಯದರ್ಶಿ ಎಚ್‍.ಆರ್. ಶೇಷಾದ್ರಿ ಮತ್ತು ಎಐಟಿಯುಸಿ ಅಧ್ಯಕ್ಷ ರಾಜು ಕೋರಿದ್ದಾರೆ.

Leave a Reply

comments

Related Articles

error: