ಪ್ರಮುಖ ಸುದ್ದಿಮನರಂಜನೆ

ಭೋಜ್ಪುರಿಯಲ್ಲಿ ಲಾಲು ಪ್ರಸಾದ್ ಯಾದವ್ ಬಯೋಪಿಕ್ : ಫೆಬ್ರವರಿಯಲ್ಲಿ ತೆರೆಗೆ

ದೇಶ(ನವದೆಹಲಿ)ಅ.30:-   ರಾಷ್ಟ್ರೀಯ ಜನತಾದಳ (ಎಜೆಡಿ) ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್   ಅವರ ಬಯೋಪಿಕ್ ಸಿದ್ಧತೆ ನಡೆಯುತ್ತಿದೆ.  ಭೋಜ್‌ಪುರಿಯಲ್ಲಿ ನಿರ್ಮಿಸಲಾಗುವ  ಈ ಚಿತ್ರಕ್ಕೆ  ‘ಲಾಲ್ ಟೆನ್’ ಎಂದು ಹೆಸರಿಸಲಾಗಿದೆ.

‘ಲ್ಯಾಂಟರ್ನ್’ ಹೆಸರಿನ ಈ ಭೋಜ್‌ಪುರಿ ಚಿತ್ರದಲ್ಲಿ ಲಾಲು ಪಾತ್ರದಲ್ಲಿ ನಟಿಸುತ್ತಿರುವ ನಟ ಯಶ್ ಕುಮಾರ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚಿತ್ರವನ್ನು ಆರ್ ಜೆಡಿ ಮುಖ್ಯಸ್ಥರ ಜೀವನದ ಮೇಲೆ ಮಾಡಲಾಗುತ್ತಿದೆ, ಈ ಚಿತ್ರದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿಯವರ ಆಸಕ್ತಿದಾಯಕ ಮತ್ತು ಆಕರ್ಷಕ ಜೀವನ ವಿಧಾನಗಳನ್ನು   ಮನಮೋಹಕ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.

ಲಾಲ್ ಟೆನ್ ಆರ್ ಜೆಡಿ ಚುನಾವಣೆಯ ಗುರುತು ಕೂಡ ಆಗಿದೆ.  ಈ ಚಿತ್ರದಲ್ಲಿ ನಟಿ ಸ್ಮೃತಿ ಸಿನ್ಹಾ ಲಾಲು ಅವರ ಪತ್ನಿ ರಾಬ್ರಿ ದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ. ಇದನ್ನು ಗುಜರಾತ್ ಮತ್ತು ಬಿಹಾರದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮನ್ ಕುಮಾರ್ ನಿರ್ಮಿಸಿರುವ ಈ ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.

ದೇಶದ ರೈಲ್ವೆ ಸಚಿವರಾಗಿದ್ದ ಲಾಲು ಅವರು ಪ್ರಸ್ತುತ ಮೇವು ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. (ಎಸ್.ಎಚ್)

Leave a Reply

comments

Related Articles

error: