ಮನರಂಜನೆ

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಜ್ಞಾ ಶೆಟ್ಟಿ

ಬೆಂಗಳೂರು,ಅ.30-ನಟಿ ಯಜ್ಞಾ ಶೆಟ್ಟಿ ಸದ್ದಿಲ್ಲದೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಉದ್ಯಮಿ ಸಂದೀಪ್ ಶೆಟ್ಟಿ ಅವರೊಂದಿಗೆ ಯಜ್ಞಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಹಿರಿಯರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ಸಂದೀಪ್‌ ಶೆಟ್ಟಿ ಕೂಡ ಮಂಗಳೂರು ಮೂಲದವರು. ಉದ್ಯಮಿಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಹೋಟೆಲ್‌ ಮತ್ತು ಕಾರ್ಖಾನೆಗಳ ಒಡೆಯರಾಗಿದ್ದಾರೆ. ಎರಡೂ ಕುಟುಂಬದವರು ನೋಡಿ ಮಾಡಿದ ಮದುವೆ ಇದಾಗಿದೆ.

ತಾರೆಯರಾದ ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ, ಪ್ರಮೀದ್‌ ಶೆಟ್ಟಿ ಮುಂತಾದವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಮದುವೆಯ ಫೋಟೋಗಳನ್ನು ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಿತ್‌ ಶೆಟ್ಟಿ ನಿರ್ದೇಶನದ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಯಜ್ಞಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ‘ಉಳಿದವರು ಕಂಡಂತೆ ಚಿತ್ರದಲ್ಲಿ ಯಜ್ಞಾ ನಟಿಸಿದಾಗಿನಿಂದ ನಾವೆಲ್ಲಾ ಸ್ನೇಹಿತರು. ಅವರ ಮನೆಯವರೆಲ್ಲಾ ನೋಡಿದ ಗಂಡು ಸಂದೀಪ್‌ ಶೆಟ್ಟಿ. ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಪ್ರಮೋದ್‌ ಹಾರೈಸಿದ್ದಾರೆ.

ವಿವಾಹದ ನಂತರ ಯಜ್ಞಾ ನಟನೆಯನ್ನು ಮುಂದುವರಿಸುವ ಸಾಧ್ಯತೆ ಇದೆ. ನಟನೆಯಲ್ಲಿ ಮುಂದುವರಿಯುವ ಆಯ್ಕೆಯನ್ನು ಯಜ್ಞಾ ಅವರಿಗೇ ಬಿಟ್ಟಿದ್ದಾರೆ ಸಂದೀಪ್‌ ಶೆಟ್ಟಿ. ಅವರ ಮನೆಯವರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಒಂದು ಅವರ ಉದ್ಯಮವನ್ನೇ ನೋಡಿಕೊಳ್ಳಬಹುದು ಅಥವಾ ನಟನೆಯನ್ನಾದರೂ ಮುಂದುವರಿಸಬಹುದು ಎಂದಿದ್ದಾರೆ.

ಯಜ್ಞಾಶೆಟ್ಟಿ ‘ಒಂದು ಪ್ರೀತಿಯ ಕಥೆ’ ಸಿನಿಮಾದ ಮೂಲಕ 2007 ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಎದ್ದೇಳು ಮಂಜುನಾಥ, ಸುಗ್ರೀವ, ಲವ್ ಗುರು, ಕಳ್ಳ ಮಳ್ಳ ಸುಳ್ಳ, ಉಳಿದವರು ಕಂಡಂತೆ, ಕಿಲ್ಲಿಂಗ್ ವೀರಪ್ಪನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ಲಕ್ಷ್ಮಿಸ್ ಎನ್ ಟಿ ಆರ್’ ತೆಲುಗು ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ನಿರ್ಮಾಣದ ‘ವಾರಸ್ಧಾರ’ ಧಾರವಾಹಿಯಲ್ಲೂ ಅಭಿನಯಿಸಿದ್ದರು. (ಎಂ.ಎನ್)

Leave a Reply

comments

Related Articles

error: