ಸುದ್ದಿ ಸಂಕ್ಷಿಪ್ತ

ಬಿಜೆಪಿಯಿಂದ ಏಕತೆಗಾಗಿ ಓಟ ನಾಳೆ

ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆ

ಮೈಸೂರು,ಅ.30 : ನಗರ ಬಿಜೆಪಿ ಘಟಕದಿಂದ ಸರ್ದಾರ್ ವಲ್ಲಭಾಬಾಯಿ ಪಟೇಲ್  ಅವರ  ಜನ್ಮ ದಿನದ ಅಂಗವಾಗಿ ಏಕತೆಗಾಗಿ ಓಟ ಹಾಗೂ ಗಾಂಧಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಗಾಂಧಿ ವೃತ್ತ (ದೊಡ್ಡ ಗಡಿಯಾರ ಪಕ್ಕಾ ) ದಿ. 31, ಬೆಳಗ್ಗೆ  9.30 ಕ್ಕೆ  ನಡೆಯಲಿದ್ದು ಬಿಜೆಪಿಯ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ಥಳೀಯ ಘಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿರುವರು. (ಕೆ.ಎಂ.ಆರ್)

Leave a Reply

comments

Related Articles

error: