ಪ್ರಮುಖ ಸುದ್ದಿ

ಮುಂದಿನ ವರ್ಷದಿಂದ 60 ರ್ಯಾಪ್ಟ್ ಗಳಿಗೆ ಅವಕಾಶ : ರಿವರ್ ರ್ಯಾಪ್ಟಿಂಗ್ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧಾರ

ರಾಜ್ಯ( ಮಡಿಕೇರಿ) ಅ.31 :- ರಿವರ್ ರ್ಯಾಪ್ಟಿಂಗ್ ಮೇಲುಸ್ತುವಾರಿ ಮತ್ತು ನಿರ್ವಹಣಾ ಸಮಿತಿ’ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಿವರ್ ರ್ಯಾಪ್ಟಿಂಗ್ ಮೇಲುಸ್ತುವಾರಿ ಮತ್ತು ನಿರ್ವಹಣೆ ಸಂಬಂಧ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಮುಂದಿನ ವರ್ಷದಿಂದ ಕೇವಲ 60 ರ್ಯಾಪ್ಟ್ ಗಳಿಗೆ ಅವಕಾಶ ನೀಡುವುದು ಹಾಗೂ ಈ ವರ್ಷ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ತಾಂತ್ರಿಕ ಸಮಿತಿಯ ನಿರ್ಣಯದಂತೆ ಮುಂದುವರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ರಿವರ್ ರ್ಯಾಪ್ಟಿಂಗ್ ನಡೆಸಲು ಪರವಾನಗಿ ಪಡೆದಿರುವವರ ರಿವರ್ ರ್ಯಾಪ್ಟರ್‍ಗಳನ್ನು ಪರಿಶೀಲನೆ ನಡೆಸಲು ಲೋಕೋಪಯೋಗಿ, ಅಗ್ನಿ ಶಾಮಕ ದಳ, ಪ್ರವಾಸೋದ್ಯಮ ಇಲಾಖೆ ಮತ್ತು ಸಮಿತಿ ಸದಸ್ಯರುಗಳು ಒಂದು ದಿನ ಖುದ್ದು ಭೇಟಿ ನೀಡಿ ರಿವರ್ ರ್ಯಾಪ್ಟ್ ನಡೆಸುವವರ ಸಂಖ್ಯೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ರಿವರ್ ರ್ಯಾಪ್ಟಿಂಗ್ ಸಮಿತಿ ಸದಸ್ಯರು, ಹಾಲಿ ಕಾರ್ಯನಿರ್ವಹಿಸುತ್ತಿರುವ ರಿವರ್ ರ್ಯಾಪ್ಟಿಂಗ್ ಸದಸ್ಯರುಗಳಿಗೆ ಪಿಟ್‍ನೆಸ್ ಸರ್ಟಿಪಿಕೇಟ್ ವಿತರಿಸಿರುವ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದವು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಮುಂದಿನ ವರ್ಷದಿಂದ ಅರ್ಜಿ ಹಾಕಿದ ಸದಸ್ಯರುಗಳಿಗೆ ಪಿಟ್‍ನೆಸ್ ಸರ್ಟಿಪಿಕೇಟ್ ನೀಡಲು ಒಂದೇ ದಿನ ಅರ್ಜಿ ಪರಿಶೀಲಿಸಿ ಪಿಟ್‍ನೆಸ್ ಸರ್ಟಿಪಿಕೇಟ್ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರ್ಯಾಪ್ಟಿಂಗ್ ನಿಯಮಗಳ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವುದು ಹಾಗೂ ಅಗತ್ಯವಿರುವ ಮಾನದಂಡಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರಚಾರ ಪಡಿಸಲು ಕ್ರಮಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಬರಪೊಳೆಯಲ್ಲಿ ರಿವರ್ ರ್ಯಾಪ್ಟಿಂಗ್‍ಗೆ ಸಂಬಂಧಿಸಿದ ಮಾಹಿತಿಯನ್ನು ಸಮಿತಿ ಸದಸ್ಯರಿಂದ ಪಡೆದ ಜಿಲ್ಲಾಧಿಕಾರಿ ಅವರು ಸಮಿತಿ ವಿಧಿಸಿರುವ ದರ ಹೊರತುಪಡಿಸಿ ಹೆಚ್ಚು ಶುಲ್ಕ ಪಡೆಯುವಂತಿಲ್ಲ. ಇದನ್ನು ಉಲ್ಲಂಘಿಸಿ ಗೈಡ್‍ಗಳು ದುಬಾರಿ ಶುಲ್ಕವನ್ನು ಕೇಳಿದ್ದಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಬರಪೊಳೆ ಹಾಗೂ ದುಬಾರೆಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗದಿಪಡಿಸಿದ ದರವನ್ನು ಫಲಕಗಳಲ್ಲಿ ನಮೂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಮಾತನಾಡಿ ಬರಪೊಳೆಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ದುಬಾರೆಯಲ್ಲಿಯೂ ಕೂಡ ಅಳವಡಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಪಿ.ಚಂದನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ವಿವಿಧ ಇಲಾಖೆಯ ಅಧಿಕಾರಿಗಳು, ರಿವರ್ ರ್ಯಾಪ್ಟಿಂಗ್ ಸಮಿತಿ ಸದಸ್ಯರಾದ ರತೀಶ್, ವಿಶ್ವ ಮತ್ತು ಮಂಜುನಾಥ್ ಅವರು ಹಲವು ಮಾಹಿತಿ ನೀಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: