ಪ್ರಮುಖ ಸುದ್ದಿ

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಇಂದಿನಿಂದ ಕೇಂದ್ರಾಡಳಿತ ಪ್ರದೇಶ

ದೇಶ(ನವದೆಹಲಿ)ಅ.31:- ರಾಷ್ಟ್ರೀಯ ಏಕತೆ ದಿನಾಚರಣೆ(ಸರ್ದಾರ್ ಪಟೇಲ್ ಜಯಂತಿ, ಅಕ್ಟೋಬರ್ 31)ಯಂದು ಭಾರತದಲ್ಲಿ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ತಲೆ ಎತ್ತಲಿವೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಇಂದಿನಿಂದ (ಅಕ್ಟೋಬರ್ 31) ಕೇಂದ್ರಾಡಳಿತ ಪ್ರದೇಶವಾಗಲಿದೆ. ನಾಳೆಯಿಂದ, ಈ ಎರಡೂ ರಾಜ್ಯಗಳಲ್ಲಿ ಅನೇಕ ಕಾನೂನುಗಳು ಕೊನೆಗೊಳ್ಳಲಿದ್ದು, ಅನೇಕ ಹೊಸ ಕಾನೂನುಗಳನ್ನು ಜಾರಿಗೆ ತರಲಾಗುವುದು. ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲು ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2019 ಅನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದರು.

ಅಕ್ಟೋಬರ್ 31ರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತವೆ ಮತ್ತು ರಾಜ್ಯದಲ್ಲಿ ಅನೇಕ ಹೊಸ ಕಾನೂನುಗಳನ್ನು ಜಾರಿಗೆ ತರಲಾಗುವುದು. ಜಮ್ಮು ಕಾಶ್ಮೀರ ವಿಧಾನಸಭೆಯೊಂದಿಗೆ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಖ್ ಅಸೆಂಬ್ಲಿ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ. (ಎಸ್.ಎಚ್)

Leave a Reply

comments

Related Articles

error: