ಮನರಂಜನೆ

ನಟಿ ಅಮೂಲ್ಯ ನಿಶ್ಚಿತಾರ್ಥ ಮಾರ್ಚ್‍ನಲ್ಲಿ

ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯಗೆ ವಿವಾಹ ಭಾಗ್ಯ ಕೂಡಿ ಬಂದಿದ್ದು ಹುಡುಗಿ ನೋಡುವ ಶಾಸ್ತ್ರ ಈಗಾಗಲೇ ಮುಗಿದಿದೆ. ಇದೀಗ ಮಾರ್ಚ್‍ನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂಬುದು ಇತ್ತೀಚಿನ ಅಧಿಕೃತ ಮಾಹಿತಿ.

ತನ್ನ 15ನೇ ವಯಸ್ಸಿನಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಎಸ್.ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಪ್ರಬುದ್ಧ ನಟನೆ ನೀಡಿದ್ದ ಅಮೂಲ್ಯ, ಸ್ಯಾಂಡಲ್‍ವುಡ್‍ನಲ್ಲಿ ಹಲವಾರು ನಾಯಕ ನಟರೊಂದಿಗೆ ಅಭಿನಯಿಸಿ ಬೇಡಿಕೆಯ ನಟಿಯಾಗಿದ್ದರು. ತಮ್ಮ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಸ್ವಲ್ಪ ದಿನಗಳ ಕಾಲ ವಿರಾಮ ನೀಡಿದ್ದರು.

ಆರ್.ಆರ್.ನಗರದ ಮಾಜಿ ಕಾರ್ಪೋರೇಟರ್ ರಾಮಚಂದ್ರ ಅವರ ಪುತ್ರ ಜಗದೀಶ್ ಜತೆ ಮದುವೆ ಮಾತುಕತೆ ನಡೆದಿದ್ದು ಯುವಕ ಜಗದೀಶ್ ಲಂಡನ್‍ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಮೇರೆಗೆ ನಡೆಯುತ್ತಿರುವ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಸೇತುವೆಯಾಗಿ ಕೆಲಸ ಮಾಡಿದೆ. ಅವರ ಮನೆಯಲ್ಲಿಯೇ ವಿವಾಹ ಮಾತುಕತೆ ನಡೆದಿರುವುದು ವಿಶೇಷತೆಯಲ್ಲಿ ವಿಶೇಷವಾಗಿದೆ.

ನಟಿ ಅಮೂಲ್ಯ ಮತ್ತು ಜಗದೀಶ್ ಅವರ ನಿಶ್ಚಿತಾರ್ಥ ಇದೇ ಮಾರ್ಚ್ 6ನೇ ತಾರೀಖಿನಂದು ನಡೆಯಲಿದೆ.

Leave a Reply

comments

Related Articles

error: