ಮನರಂಜನೆ

10 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದ `ಪೊಗರು’ ಟ್ರೈಲರ್

ಬೆಂಗಳೂರು,ಅ.31-ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಪೊಗರು’ ಟ್ರೈಲರ್ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಟ್ರೈಲರ್ 10 ಮಿಲಿಯನ್ ಗೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

ಈ ಮೂಲದ ದರ್ಶನ್ ಅಭಿನಯದ ಕುರುಕ್ಷೇತ್ರ, ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಟ್ರೈಲರ್ ನ ದಾಖಲೆಯನ್ನು ಪೊಗರು ಟ್ರೈಲರ್ ಅಳಿಸಿ ಹಾಕಿದೆ.

ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಟ್ರೇಲರ್ ಗಳು 4 ಮಿಲಿಯನ್ ಹಿಟ್ಸ್ ಪಡೆದುಕೊಂಡಿದ್ದು, ‘ಪೊಗರು’ 10 ಮಿಲಿಯನ್ ವೀಕ್ಷಣೆ ಪಡೆದಿದೆ. ‘ಯುವರತ್ನ’ ಟೀಸರ್ ಸಹ 3 ಮಿಲಿಯನ್ ಹಿಟ್ಸ್ ಪಡೆಯಲು ಮಾತ್ರ ಸಾಧ್ಯವಾಗಿದೆ. ಆನಂದ್ ಆಡಿಯೋದಲ್ಲಿ ಟ್ರೈಲರ್ ಅ.23 ರಂದು ಬಿಡುಗಡೆಯಾಗಿತ್ತು.

ಸದ್ಯಕ್ಕೆ ಚಿತ್ರದ ಮಾಸ್ ಡೈಲಾಗ್ ಗಳಿರುವ ಟ್ರೈಲರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಟ್ರೈಲರ್ ಬಹಳ ಇಷ್ಟ ಆಗಿದೆ.

ನಂದ ಕಿಶೋರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಬರಲಿದೆ. (ಎಂ.ಎನ್)

Leave a Reply

comments

Related Articles

error: