ಮೈಸೂರು

ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ರಾಷ್ಟ್ರೀಯ ಏಕತಾ ದಿವಸ : 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಮೈಸೂರು,ಅ.31:-  ಭಾರತದ ಮೊದಲ ಗೃಹ ಮಂತ್ರಿಗಳಾದ ಶ್ರೀ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಇಂದು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ “ರಾಷ್ಟ್ರೀಯ ಏಕತಾ ದಿವಸ” ಆಚರಣೆ ಸಮಯದಲ್ಲಿ ಆಯೋಜಿಸಲಾಗಿದ್ದ “ಏಕತೆಗಾಗಿ ಓಟ” (Run For Unity-2019) 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

ಪುರುಷರ ವಿಭಾಗ ದಲ್ಲಿ ಅನಿಲ್ ಕುಮಾರ್, ಪ್ರೈಡ್ ಕ್ಲಬ್, ಮೈಸೂರು ಇವರು ಪ್ರಥಮ ಬಹುಮಾನವನ್ನು, ದ್ವಿತೀಯ ಬಹುಮಾನವನ್ನು ವಿಶ್ವಾಸ್, ಮೈಸೂರು, ತೃತೀಯ ಬಹುಮಾನ- ಸುನಿಲ್, ಮೈಸೂರು ಪಡೆದುಕೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅರ್ಚನ. ಕೆ ಎಂ, ಅರಣ್ಯ ಇಲಾಖೆ, ಮೈಸೂರು, ದ್ವಿತೀಯ ಬಹುಮಾನ- ತಿಪ್ಪವ್ವ ಸಣ್ಣಕ್ಕಿ, ರೈಲ್ವೇ ಇಲಾಖೆ, ಮೈಸೂರು, ತೃತೀಯ ಬಹುಮಾನ- ಕವನ ಟಿ, ಎಕ್ಸೆಲೆಂಟ್ ಸ್ಪೋರ್ಟ್ಸ್ ಕ್ಲಬ್, ಮೈಸೂರು ಇವರು ಪಡೆದುಕೊಂಡಿರುತ್ತಾರೆ.

ವಿಜೇತರಿಗೆ ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ   ಕೆ.ಟಿ ಬಾಲಕೃಷ್ಣ,   ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ   ರಿಷ್ಯಂತ್  ವಿತರಿಸಿ ಅಭಿನಂದಿಸಿದರು. (ಎಸ್.ಎಚ್)

Leave a Reply

comments

Related Articles

error: