ಪ್ರಮುಖ ಸುದ್ದಿ

ಕೊಡಗು ಕೋವಿ ಹಕ್ಕು ಅವಧಿ ವಿಸ್ತರಣೆ

ರಾಜ್ಯ( ಮಡಿಕೇರಿ) ನ.1:- ಕೊಡವ ಸಮುದಾಯ ಮತ್ತು ಕೊಡಗಿನಲ್ಲಿ ಜಮ್ಮಾಭೂಮಿ ಹೊಂದಿರುವ ಜನಾಂಗದ ‘ಕೂರ್ಗ್ ಬೈ ರೇಸ್’ ಹಾಗೂ ‘ಜಮ್ಮಾ’ ಕೋವಿ ಹಕ್ಕು ಹೊಂದುವ ಅವಧಿಯನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕೇಂದ್ರ ಗೃಹ ಇಲಾಖೆಗೆ ಅಧಿಕೃತ ದಾಖಲಾತಿಗಳ ಮೂಲಕ ಮನದಟ್ಟು ಮಾಡುವ ಮೂಲಕ ಕೊಡವ ಬೈ ರೇಸ್ ಹಾಗೂ ಜಮ್ಮಾ ಕೋವಿ ಹಕ್ಕನ್ನು ಮುಂದುವರಿಸುವಂತೆ ಮನವಿ ಮಾಡಲಾಗಿತ್ತು. ಮಾತ್ರವಲ್ಲದೇ, ಸ್ವಾತಂತ್ರ ಪೂರ್ವದಲ್ಲೇ ಕೊಡಗು ಜಿಲ್ಲೆಯಲ್ಲಿ ಬಂದೂಕಿನ ಬಳಕೆ, ಬ್ರಿಟಿಷರ ಕಾಲದಲ್ಲೂ ಬಂದೂಕು ಹೊಂದಲು ನೀಡಿದ್ದ ವಿನಾಯಿತಿ, ಜಿಲ್ಲೆಯ ಜನಾಂಗದ ಬಂದೂಕು ಸಂಸ್ಕøತಿಯ ವಿವರವನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.
ಇದೀಗ ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 29 ರಂದು ತನ್ನ ಅಧಿಕೃತ ಗೆಜೆಟ್ ಪ್ರಕಟಣೆ ಮೂಲಕ ಆದೇಶ ಹೊರಡಿಸಿ ಕೊಡಗಿನ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಕೋವಿ ಹಕ್ಕನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್. ದಾಸ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕೊಡಗು ಮೂಲದ ವ್ಯಕ್ತಿಯೋರ್ವರು ಬಂದೂಕು ಹಕ್ಕಿನ ಕುರಿತು ತಕರಾರು ತೆಗೆದು ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್‍ನಲ್ಲೂ ಪ್ರಶ್ನಿಸಿದ್ದರು. ಬೆಂಗಳೂರು ಕೊಡವ ಸಮಾಜ ಮತ್ತು ಅದರ ಬೆಂಬಲಕ್ಕೆ ನಿಂತ ವಿವಿಧ ಸಂಘ ಸಂಸ್ಥೆಗಳು ಈ ವಿಚಾರದ ಕುರಿತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿವೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: