ಕ್ರೀಡೆ

ವಯಸ್ಸಿನ ತಪ್ಪು ಮಾಹಿತಿ  ನೀಡಿದ ಇಬ್ಬರು ಕ್ರಿಕೆಟಿಗರಿಗೆ 2 ವರ್ಷಗಳ ನಿಷೇಧ ಹೇರಿದ ಬಿಸಿಸಿಐ

ದೇಶ(ನವದೆಹಲಿ)ನ.2:- ಕ್ರಿಕೆಟ್‌ನಲ್ಲಿ ತನ್ನ ಇಮೇಜ್ ಸುಧಾರಿಸಲು ಕೆಲವು ಸಮಯದಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)  ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರ ವಿಷಯವಿರಲಿ ಅಥವಾ ಕ್ರಿಕೆಟಿಗರು ತಮ್ಮ ವಯಸದಸಿನ ಕುರಿತು ತಪ್ಪು ಮಾಹಿತಿ ನೀಡುವುದು ಮಾಡಿದರೆ ಕ್ರಮ ಕೈಗೊಳ್ಳಲಿದೆ.    ಪ್ರತಿಯೊಂದು ಸಂದರ್ಭದಲ್ಲೂ ಬಿಸಿಸಿಐ ಕಟ್ಟುನಿಟ್ಟಾಗಿರುವುದು ಮಾತ್ರವಲ್ಲದೆ ಶೀಘ್ರ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿನ ಪ್ರಕರಣದಲ್ಲಿ, ಇಬ್ಬರು ಒಡಿಶಾ ಕ್ರಿಕೆಟಿಗರು ತಮ್ಮ  ವಯಸ್ಸಿನ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಿಸಿಸಿಐ ಕ್ರಮ ಕೈಗೊಂಡಿದೆ.

ಈ ಇಬ್ಬರು ಕ್ರಿಕೆಟಿಗರು ವಯಸ್ಸಿಗೆ ನೀಡಿದ ದಾಖಲೆಗಳು ನಕಲಿ ಮತ್ತು ಅದರಲ್ಲಿ ಅವರ ವಯಸ್ಸು ತಪ್ಪಾಗಿದೆ ಎಂದು ಆರೋಪಿಸಲಾಗಿದೆ. ಕ್ರಿಕೆಟ್‌ನಲ್ಲಿ ಕಿರಿಯ ಮಟ್ಟದಲ್ಲಿ, 13 ವರ್ಷದೊಳಗಿನವರು, 16 ವರ್ಷದೊಳಗಿನವರು ಅಥವಾ 19 ವರ್ಷದೊಳಗಿನವರ ವಿಭಾಗದಲ್ಲಿ ಅನೇಕ ಆಟಗಾರರು ತಮ್ಮ ವಯಸ್ಸನ್ನು ತಪ್ಪಾಗಿ ನಿರೂಪಿಸುತ್ತಾರೆ ಮತ್ತು ಅದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ.  ಈ ಪ್ರಕರಣದಲ್ಲಿ ಇಬ್ಬರು ಒಡಿಶಾ ಆಟಗಾರರಾದ ರಾಜೇಶ್ ಮೊಹಂತಿ ಮತ್ತು ಕೃಷ್ಣ ಪಿಳ್ಳೈ ಅವರನ್ನು ಎರಡು ವರ್ಷಗಳ ಕಾಲ  ವಯಸ್ಸಿನ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಿಷೇಧಿಸಲಾಗಿದೆ. (ಎಸ್.ಎಚ್)

Leave a Reply

comments

Related Articles

error: