ಮೈಸೂರು

ಜೂಜಾಡುತ್ತಿದ್ದ 13 ಜನರ ಬಂಧನ : 2,53,170ರೂ.ನಗದು, 12 ಮೊಬೈಲ್ ಫೋನ್‍  ವಶ

ಮೈಸೂರು,ನ.2:- ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು   01/11/2019 ರಂದು ದೇವರಾಜ ಪೊಲೀಸ್ ಠಾಣಾ ಸರಹದ್ದಿನ ದೇವರಾಜ ಮೊಹಲ್ಲಾದ ಸೀಬಯ್ಯ ರಸ್ತೆಯಲ್ಲಿರುವ ನಂ.1432/ಬಿ,  ಪ್ರೀತಿ ಹೋಂ ಲಾಡ್ಜ್‍ನ 1ನೇ ಮಹಡಿಯಲ್ಲಿರುವ ರೂಂ ನಂ. 501 ರ ಮೇಲೆ ದಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ  13ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವು @ ಗುರು ಬಿನ್ ಮಂಜುನಾಥ, (35), ಮಂಡಿ ಮೊಹಲ್ಲಾ,  ಧನಂಜಯ ಬಿನ್ ಸಿದ್ದರಾಮೇಗೌಡ, (30), ಬಿಳಿಗೆರೆ ಗ್ರಾಮ, ಹುಣಸೂರು ತಾಲೂಕು,  ಆನಂದ್ ಬಿನ್ ವಾಸು, 34ವರ್ಷ, ಮಂಡಿ ಮೊಹಲ್ಲಾ,  ಮಲ್ಲೇಶ ಬಿನ್ ಮಲ್ಲೇಗೌಡ, (32), ಹುಣಸಗಳ್ಳಿ ಗ್ರಾಮ, ಬನ್ನೂರು, ಗಿರೀಶ್ ಬಿನ್ ಲೇಟ್ ವೆಂಕಟೇಶ್, (35), ಕೆ.ಎನ್.ಪುರ,   ಮಹೇಶ ಬಿನ್ ಮಾದೇಗೌಡ, (38) ಹುಣಸಗಳ್ಳಿ ಗ್ರಾಮ, ಬನ್ನೂರು,  ರಾಜೇಶ್ ಬಿನ್ ನಾರಾಯಣರಾವ್, (49), ಕಲ್ಯಾಣಗಿರಿ, ಕುಮಾರ ಬಿನ್ ಬಾಳೇಗೌಡ, (48), ಲಕ್ಷ್ಮೀಸಾಗರ ಗ್ರಾಮ, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ. ಮಹದೇವ ಬಿನ್ ಮಾದೇಗೌಡ, (38), ಪಾಪಣ್ಣ ಲೇಔಟ್, ಯರಗನಹಳ್ಳಿ,  ಮಂಜು ಬಿನ್ ಹುಚ್ಚೇಗೌಡ, (38), ಕೊಕ್ಕರೆ ಹುಂಡಿ, ಶ್ರೀರಂಗಪಟ್ಟಣ ತಾಲೂಕು,   ಪ್ರಕಾಶ್.ಎನ್.ಬಿನ್ ನಾರಾಯಣಪ್ಪ, (48), ಸುಣ್ಣದಕೇರಿ, ಕೆ.ಆರ್.ಮೊಹಲ್ಲಾ,  ಕೃಪಾಕರ @ ಕೃಪಾ ಬಿನ್ ಜಿ.ರಾಮು, (47), 5ನೇ ಕ್ರಾಸ್, ಕೆ ಬ್ಲಾಕ್, ಕುವೆಂಪುನಗರ, ದಕ್ಷಿಣಾಮೂರ್ತಿ @ ವಿಜಯಕುಮಾರ್ ಬಿನ್ ಪೊನ್ನಸ್ವಾಮಿ, (46), ಮಂಡಿ ಮೊಹಲ್ಲಾ,  ಎಂಬವರುಗಳನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ  2,53,170ರೂ. ನಗದು ಹಾಗೂ 12 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.  ಈ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.   ಮುತ್ತುರಾಜು.ಎಂ.   ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ. ಎ.ಸಿ.ಪಿ.  ಮರಿಯಪ್ಪ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್  ಎ.ಮಲ್ಲೇಶ್, ಎ.ಎಸ್.ಐ. ಆರ್.ರಾಜು ಹಾಗೂ ಸಿಬ್ಬಂದಿಗಳಾದ ದೀಪಕ್, ಜೋಸೆಫ್ ನೊರೋನ್ಹ, ಡಿ.ಶ್ರೀನಿವಾಸಪ್ರಸಾದ್, ವಿ.ರಘು, ಕೆ.ಜಿ.ಶ್ರೀನಿವಾಸ, ಶಿವಕುಮಾರ್‍   ಮಾಡಿರುತ್ತಾರೆ. (ಎಸ್.ಎಚ್)

Leave a Reply

comments

Related Articles

error: