ಕರ್ನಾಟಕ

ಭ್ರಷ್ಟ ಅಧಿಕಾರಿ ಮನೆಯಲ್ಲಿ 7.5 ಲಕ್ಷ ರೂ ನಗದು, 1.5 ಕೋಟಿ ಮೌಲ್ಯದ ರೇಷ್ಮೆ ಸೀರೆಗಳು, ಅಪಾರ ಆಸ್ತಿ ದಾಖಲೆ ಪತ್ತೆ

ಹುಬ್ಬಳ್ಳಿ: ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ಅಧಿಕಾರಿಗಳು ಮಂಗಳವಾರ ಹುಬ್ಬಳ್ಳಿಯ ವಿಶ್ವೇಶ್ವರನಗರ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆಗೆ ದಾಳಿ ಮಾಡಿ 7.50 ಲಕ್ಷ ನಗದು ಹಾಗೂ 1.5 ರುಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನು ಪತ್ತೆ ಮಾಡಿದ್ದಾರೆ.

ಕರಿಯಪ್ಪ ಕರ್ನಲ್‌ ಅವರ ಪತ್ನಿ ಶಾಂತಾ ಅವರು ರೇಷ್ಮೆ ಸೀರೆಗಳ ವ್ಯಾಮೋಹಕ್ಕೆ ಸಾಕ್ಷಿಯಾಗಿ 7 ಸಾವಿರ ಹೆಚ್ಚು ರೇಷ್ಮೆ ಸೀರೆಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ 1.5 ಕೋಟಿ  ರುಪಾಯಿ ಎಂದು ಅಂದಾಜಿಸಲಾಗಿದೆ.

ರೇಷ್ಮೆ ಸೀರೆ ಮಧ್ಯದಲ್ಲಿ ಬಚ್ಚಿಟ್ಟಿದ್ದ 2,000 ರು. ಮುಖಬೆಲೆಯ 1.30 ಲಕ್ಷ ರು. ನಗದು ಸಹ ಪತ್ತೆಯಾಗಿದೆ. ಮಂಜುನಾಥ ನಗರದಲ್ಲಿನ ಬಂಗಲೆ, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್, ಕೃಷಿ ಜಮೀನು, ನಿವೇಶನ, ಕಾರು, ಬೈಕ್, ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ, ಖಾಲಿ ನಿವೇಶನ, ಚಿನ್ನಾಭರಣ ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಮಂಗಳವಾರ ಎಸಿಬಿ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ 8 ಕಡೆ ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದರು. ದಾಳಿ ವೇಳೆ ಪತ್ತೆಯಾದ ಆಸ್ತಿ, ಪಾಸ್ತಿ, ನಗದು ವಿವರಗಳ ಪೂರ್ಣ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ಇನ್ನಷ್ಟೇ ನೀಡಬೇಕಿದೆ.

Leave a Reply

comments

Related Articles

error: