ಪ್ರಮುಖ ಸುದ್ದಿ

ಪೊನ್ನಂಪೇಟೆಯ ನಲ್ಲೂರು ಗ್ರಾಮದಲ್ಲಿ ರೇವ್ ಪಾರ್ಟಿ : ಮೂವರ ಬಂಧನ

ರಾಜ್ಯ(ಮಡಿಕೇರಿ) ನ.4 :- ಪೊನ್ನಂಪೇಟೆಯ ನಲ್ಲೂರು ಗ್ರಾಮದ ಹೋಂಸ್ಟೇವೊಂದರಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆದಳ, ಮಾದಕ ವಸ್ತು ಮತ್ತು ನಗದನ್ನು ವಶಪಡಿಸಿಕೊಂಡಿದೆ.

ಪೊನ್ನಂಪೇಟೆ ನಿವಾಸಿ ಪಿ.ಕೆ.ಮುತ್ತಪ್ಪ(45), ಹೈದರಬಾದ್‌ನ ವಿದ್ಯಾರ್ಥಿಗಳಾದ ಎಲ್.ನಿತೀಶ್(23) ಹಾಗೂ ಬಿ.ಭರತ್ ಚಂದ್ರ(22) ಬಂಧಿತ ಆರೋಪಿಗಳು. ಸುಮಾರು 65 ಗ್ರಾಂ ಗಾಂಜಾ, ಮದ್ಯ ಹಾಗೂ ಗಾಂಜಾ ಮಾರಾಟ ಮಾಡಿ ಬಂದ ರೂ.84 ಸಾವಿರ ನಗದು, 2 ಮೊಬೈಲ್, 21 ಬಿಯರ್ ಬಾಟಲ್, ಜನರೇಟರ್ ಸೆಟ್, 6 ಡಿಜೆ ಸೌಂಡ್ ಸಿಸ್ಟಮ್ ಹಾಗೂ ಪ್ರಚಾರಕ್ಕೆ ಬಳಸಿದ ಬ್ಯಾನರ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ರೇವ್ ಪಾರ್ಟಿ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡಿದ ಕಾರಣ ಚಂಢೀಗಡ, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರು ನಗರದ ಯುವಕ, ಯುವತಿಯರು ನ.2 ರ ರಾತ್ರಿ ಹೋಂಸ್ಟೇಯಲ್ಲಿ ಜಮಾಯಿಸಿ ಪಾರ್ಟಿಯಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಅಪರಾಧ ಪತ್ತೆ ದಳದ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನದಲ್ಲಿ ಹೋಂಸ್ಟೇ ಮೇಲೆ ದಾಳಿ ನಡೆಸಿದರು.

ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್, ಎಎಸ್‌ಐ. ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೀಶ್, ವೆಂಕಟೇಶ್, ವಸಂತ, ಅನಿಲ್ ಕುಮಾರ್, ಮಹಿಳಾ ಸಿಬ್ಬಂದಿಗಳಾದ ಸುಮತಿ, ಮಮತ, ಚಾಲಕ ಶಿವಕುಮಾರ್, ಇತರೆ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಜೋಸೆಫ್, ಸಾಜಿ ಜೋಸ್, ನಿಶಾಂತ್, ರಾಜ, ಕುಟ್ಟ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಕುಮಾರ್, ಸಿಬ್ಬಂದಿಗಳಾದ ಸಾದಾಲಿ, ಸತೀಶ್, ಮನು, ಹರೀಶ್ ಹಾಗೂ ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: