ಪ್ರಮುಖ ಸುದ್ದಿ

ಶ್ರೀನಗರದಲ್ಲಿ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ : 15ಮಂದಿ ಗಾಯ

ದೇಶ(ಶ್ರೀನಗರ)ನ.4:-  ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಮೌಲಾನಾ ಆಜಾದ್ ರಸ್ತೆಯ ಲಾಲ್ ಚೌಕ್ ಬಳಿ ಭಯೋತ್ಪಾದಕರು ಇಂದು ಗ್ರೆನೇಡ್‌  ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ 10 ರಿಂದ 15 ಕ್ಕೆ ಏರಿದೆ. ಭಯೋತ್ಪಾದಕ ದಾಳಿಯ ನಂತರ ಈ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದ್ದು, ಭದ್ರತಾ ಪಡೆಗಳು ಸ್ಥಳಕ್ಕೆ ತಲುಪಿವೆ. ಆದರೆ, ಭಯೋತ್ಪಾದಕರು ದಾಳಿ ಮಾಡಿದ ನಂತರ ತಪ್ಪಿಸಿಕೊಂಡಿದ್ದಾರೆ. ಭದ್ರತಾ ಪಡೆ ಅವರ ಹುಡುಕಾಟ ನಡೆಸುತ್ತಿದ್ದು ಶೋಧ ಕಾರ‍್ಯಾಚರಣೆ ನಡೆಸುತ್ತಿದೆ.

ಸೈನ್ಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದ  ಭಯೋತ್ಪಾದಕರು ಇದೀಗ ಕಣಿವೆಯ ಸಾಮಾನ್ಯ ಜನರನ್ನು ಗುರಿಯಾಗಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. 370 ನೇ ವಿಧಿಯನ್ನು ಕಾಶ್ಮೀರದಿಂದ ತೆಗೆದುಹಾಕಿದಾಗಿನಿಂದ ಭಯೋತ್ಪಾದಕ ಸಂಘಟನೆಗಳು  ತಮ್ಮ ಕಿಡಿಗೇಡಿ ಕೃತ್ಯ ಮುಂದುವರಿಸಿದ್ದು,  ಈಗ ಸಾಮಾನ್ಯ ಜನರನ್ನು ನಿರಂತರವಾಗಿ ಗುರಿಯಾಗಿಸ ತೊಡಗಿದೆ ಎಂದು ಹೇಳಲಾಗುತ್ತಿದೆ.  (ಎಸ್.ಎಚ್)

Leave a Reply

comments

Related Articles

error: