ಮೈಸೂರು

ರಾಜ್ಯೋತ್ಸವ ಪ್ರಶಸ್ತಿ : ಪ್ರಾಧಿಕಾರ ಸದಸ್ಯರ ಅಭಿನಂದನೆ .6.

ಮೈಸೂರು.ನ.4 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ವಿವಿಧ ಅಕಾಡೆಮಿ ಪ್ರಾಧಿಕಾರ ಅಧ್ಯಕ್ಷರ, ಸದಸ್ಯರ ಅಭಿನಂದನಾ ಕಾರ್ಯಕ್ರಮವನ್ನು ನ.6ರ ಸಂಜೆ 5 ಗಂಟೆಗೆ ವಿಜಯನಗರದ 1ನೇ ಹಂತದ ಜಿಲ್ಲಾ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಾಸಕ ಎಲ್.ನಾಗೇಂದ್ರ ಉದ್ಘಾಟಿಸುವರು, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿನಂದಿಸುವರು, ಪ್ರೊ.ಮಲೆಯೂರು ಗುರುಸ್ವಾಮಿಯವರಿಂದ ಅಭಿನಂದನಾ ನುಡಿ. ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ. ಹಲವರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: