ಕ್ರೀಡೆಮೈಸೂರು

ಚಿನ್ನದ ಪದಕ ಗಳಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ

ಹೈದ್ರಾಬಾದ್ ನಲ್ಲಿ 38ನೇ ರಾಷ್ಟ್ರೀಯ ಹಿರಿಯರ ಕ್ರೀಡಾ ಕೂಟದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವರು ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಕಾನ್ಸಟೇಬಲ್ ಅಮರ್ ನಾಥ್ ಸಿಹೆಚ್.ಸಿ. 229 ಅವರು 110ಮೀ. ಅಡೆತಡೆ ಓಟದಲ್ಲಿ ಚಿನ್ನದ ಪದಕ, 100ಮೀ ಓಟದಲ್ಲಿ ಕಂಚಿನ ಪದಕ, ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಮತ್ತು  4*100 ರಿಲೇ ನಲ್ಲಿ ಬೆಳ್ಳಿಯ ಪದಕಗಳಿಸಿರುತ್ತಾರೆ. ಇವರು  ಕ್ರೀಡೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಗಳಿಸುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಗೆ ಗೌರವ ತಂದಿರುತ್ತಾರೆ.  ಇವರ ಸಾಧನೆಯನ್ನು ಪೊಲೀಸ್ ಆಯುಕ್ತ ಡಾ.ಸುಬ್ರಮಣೇಶ್ವರ ರಾವ್ ಶ್ಲಾಘಿಸಿದ್ದಾರೆ.

Leave a Reply

comments

Related Articles

error: