ಮೈಸೂರು

ಆ್ಯಂಡಲಸ್ ಇಂಗ್ಲಿಷ್ ಶಾಲೆಯಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು,ನ.5:- ಆ್ಯಂಡಲಸ್ ಇಂಗ್ಲಿಷ್ ಶಾಲೆಯಲ್ಲಿ 64 ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ವಿದ್ಯಾರ್ಥಿಗಳು ರಾಜ್ಯ ಗೀತೆ ಹಾಡುವ ಮೂಲಕ, ಕರ್ನಾಟಕದ ಶ್ರೇಷ್ಠ ಕವಿಗಳು / ವ್ಯಕ್ತಿಗಳ ಉಡುಪನ್ನು ಧರಿಸುವ ಮೂಲಕ ಮತ್ತು ಸುಂದರವಾದ ನೃತ್ಯ ಪ್ರದರ್ಶನವನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯ ಹೆಮ್ಮೆಯ ಪರಂಪರೆಯನ್ನು ಪ್ರಸ್ತುತಪಡಿಸಿದರು.    ಅತ್ಯುತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆಯ ಸಂಕೇತವಾಗಿ ಸ್ಮರಣಿಕೆ ನೀಡಲಾಯಿತು. ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕವರ್ಗ & ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: