ಮೈಸೂರು

ಕುಕ್ಕರಹಳ್ಳಿ ಕೆರೆ ಹೂಳೆತ್ತಲು ಪರ ವಿರೋಧದ ಹಿನ್ನೆಲೆ ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ: ಪರಿಶೀಲನೆ

ಕುಕ್ಕರಹಳ್ಳಿ ಕೆರೆಯಲ್ಲಿ ಹೂಳೆತ್ತುವ   ಮತ್ತು ಇತರೆ ಕಾಮಗಾರಿಗಳ ಕುರಿತು ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಬುಧವಾರ ಬೆಳಿಗ್ಗೆ ಕುಕ್ಕರಹಳ್ಳಿ ಕೆರೆಗೆ ತೆರಳಿ ಅಲ್ಲಿನ ಪರಿಸರವನ್ನು ಪರಿಶೀಲನೆ ನಡೆಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕುಕ್ಕರಹಳ್ಳಿ ಕೆರೆ ಉಳಿಸಿ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಸಂದರ್ಭ ಅಲ್ಲಿಗೆ ಬಂದಂತಹ ವಾಯುವಿಹಾರಿಗಳನ್ನು, ಪರಿಸರ ಪ್ರೇಮಿಗಳನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ಕೆಲವರು ಅಭಿವೃದ್ಧಿ ಪಡಿಸಿ ಎಂದರೆ ಇನ್ಕೆಲವರು ಅಭಿವೃದ್ಧಿ ಬೇಡ ಇರೋ ಹಾಗೆ ಇರಲಿ ಬಿಡಿ. ಅಭಿವೃದ್ಧಿ  ಹೆಸರಲ್ಲಿ ಕೆರೆಯನ್ನು ಹಾಳುಮಾಡಬೇಡಿ ಎಂದು ಕೇಳಿಕೊಂಡರು. ಜಿಲ್ಲಾಧಿಕಾರಿಗಳೊಂದಿಗೆ ಪರಿಸರವಾದಿಗಳು ಮಾತನಾಡಿ ಕೆರೆಯಲ್ಲಿ ಹಲವಾರು ವಿಧದ ಪಕ್ಷಿಸಂಕುಲಗಳಿವೆ. ಕೆರೆಯನ್ನು ಹೂಳೆತ್ತಿ ಜೆಟ್ ಪಂಪ್ ಅಳವಡಿಸುವುದರಿಂದ ಅವುಗಳ ಅಭಿವೃದ್ಧಿಗೆ ಮಾರಕವಾಗಲಿದೆ. ಆದರೆ ಬೇರೆ ತೆರನಾದ ತಾಂತ್ರಿಕತೆಯಿಂದ ಕೆರೆಯ ನೀರಿನ ಒಳಗಡೆ ಮೈಕ್ರೋ ಬಬ್ಲ್ ಮೂಲಕ ಡಿಸಾಲ್ವ್ಡ್ ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಅವಶ್ಯಕ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

ಕೆಲವು ವಾಯುವಿಹಾರಿಗಳು ಇಲ್ಲಿ ಕಾಂಕ್ರೀಟ್ ಮಯ ಮಾಡುವುದು ಬೇಡ. ಹಾಗೆ ಮಾಡಿದರೆ ಇಲ್ಲಿ ಪಕ್ಷಿಗಳು ಬರುವುದಿಲ್ಲ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್  ಪರಿಸರಕ್ಕೆ ಮಾರಕವಾಗುವಂತಹ ಯಾವ ಕಾರ್ಯಗಳನ್ನೂ ಕೈಗೆತ್ತಿಕೊಳ್ಳುವುದಿಲ್ಲ.  ಸದ್ಯಕ್ಕೆ ಇಲ್ಲಿಗೆ ಕೈಬಿಡಲಾಗುವುದು. ಎಲ್ಲರ ಅಭಿಪ್ರಾಯವನ್ನೂ ಸಂಗ್ರಹಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಶಾಸಕ ವಾಸು, ಕುಕ್ಕರಹಳ್ಳಿಕೆರೆ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯ ಯು.ಎನ್.ರವಿಕುಮಾರ್ ಸೇರಿದಂತೆ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳ ಜೊತೆಗಿದ್ದರು.

Leave a Reply

comments

Related Articles

error: