ಪ್ರಮುಖ ಸುದ್ದಿ

ಕರಿಮೆಣಸು ಕಳ್ಳತನ : ವಿರಾಜಪೇಟೆಯಲ್ಲಿ ಚೋರನ ಬಂಧನ

ರಾಜ್ಯ( ಮಡಿಕೇರಿ) ನ.6 :- ತೋಟದ ಲೈನ್ ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಕರಿ ಮೆಣಸು ಕಳ್ಳತನ ಮಾಡಿ, ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು  ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವೀರಾಜಪೇಟೆ ತಾಲ್ಲೂಕಿನ ಕುಂಜಿಲ ಗ್ರಾಮದ ನಿವಾಸಿ ಹ್ಯಾರಿಸ್ (40) ಎಂಬಾತನೆ ಬಂಧನಕ್ಕೆ ಒಳಗಾಗಿರುವ ವ್ಯಕ್ತಿ.

ವೀರಾಜಪೇಟೆ ತಾಲ್ಲೂಕಿನ ಕುಂಜಿಲ ಗ್ರಾಮದ ನಿವಾಸಿಯಾದ ಉದಿಯಂಡ ಸುಭಾಷ್ ಅವರು, ತಮ್ಮ ತೋಟದ ಲೈನ್ ಮನೆಯ ಕೋಣೆಯೊಂದರಲ್ಲಿ  ಕರಿ ಮೆಣಸನ್ನು ದಾಸ್ತಾನು ಮಾಡಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿ ದಾಸ್ತಾನಿಟ್ಟಿದ್ದ 47ಕೆ.ಜಿ.ಯ  14 ಸಾವಿರ ರೂ. ಮೌಲ್ಯದ ಕರಿ ಮೆಣಸನ್ನು ಹ್ಯಾರಿಸ್ ಕಳ್ಳತನ ಮಾಡಿ,  ಮಾರಾಟಕ್ಕೆಂದು ವಿರಾಜಪೇಟೆಗೆ  ತಂದಿದ್ದ.

ಕಳ್ಳತನದ ಬಗ್ಗೆ ಖಚಿತ ಮಾಹಿತಿ ಆಧರಿಸಿ ನಗರ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಮತ್ತು ಕದ್ದ ಮಾಲನ್ನು ವಶ ಪಡೆದಿದ್ದಾರೆ.

ವೃತ್ತ ನಿರೀಕ್ಷಕರಾದ ಕ್ಯಾತೆಗೌಡ ಅವರ ನಿರ್ದೇಶನದ ಮೇರೆ, ನಗರ  ಠಾಣಾಧಿಕಾರಿ ಎಂ. ಮರಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕಾವೇರಮ್ಮ, ಗಿರೀಶ್, ಸುನಿಲ್, ಮತ್ತು ಮಲ್ಲಿಕಾರ್ಜನ ಕೆ.  ಭಾಗವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: