ಮೈಸೂರು

ಇಂದಿನಿಂದ ಐದು ದಿನಗಳ ಕಾಲ ಮೈಸೂರು ಜಿಲ್ಲೆಯಲ್ಲಿ ತುಂತುರು ಮಳೆ ಸಾಧ್ಯತೆ

ಮೈಸೂರು,ನ.6:- ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ   ೦6-11-2019ರಿಂದ 10-11-2019 ವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಾಧ್ಯತೆಯಿದೆ ಎಂದು ನಾಗನಹಳ್ಳಿ   ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಗರಿಷ್ಠ ಉಷ್ಣಾಂಶ 29-30 ಡಿಗ್ರಿ ಸೆ. ಮತ್ತು ಕನಿಷ್ಠ ಉಷ್ಣಾಂಶ 16-18 ಡಿಗ್ರಿ ಸೆ. ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇಕಡ 80-85 ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇಕಡ 70-75 ಮತ್ತು ಗಾಳಿಯು ಗಂಟೆಗೆ ಸರಾಸರಿ 2-4.5 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

ರೈತರು ನವೆಂಬರ್‌ತಿಂಗಳಿನಲ್ಲಿ ಬಿತ್ತನೆ ಮಾಡುವ ಬೆಳೆಗಳು ಮತ್ತು ತಳಿಗಳು

ಕಬ್ಬು : ಸಿ.ಓ-62175, ಸಿ.ಓ-419, ಸಿ.ಓ-7804, ಸಿ.ಓ-86032, ಸಿ.ಓ-8371

ಸೋಯಾ ಅವರೆ : ಕೆ.ಬಿ-79, ಕರುಣೆ (ನೀರಾವರಿ), ಅವರೆ: ಹೆಚ್.ಎ-3, ಹೆಚ್.ಎ-4

ಕಡಲೆ : ಅಣ್ಣಿಗೇರಿ-1, ಜೆ.ಜಿ-11, ವಿಶಾಲ್, ಕೆ.ಎ.ಕೆ-2

ತೋಟಗಾರಿಕೆ ಬೆಳೆಗಳು : ಬೆಳ್ಳುಳ್ಳಿ, ಟೊಮ್ಯಾಟೋ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸು ಬಟಾಣಿ, ಕಲ್ಲಂಗಡಿ, ಕ್ಯಾರೆಟ್.

ಭತ್ತ ತೆಂಡೆ ಹೊಡೆಯುವ ಹಂತದಲ್ಲಿದ್ದು, ಬೆಂಕಿ ರೋಗ ಹತೋಟಿಗಾಗಿ ಕಾರ್ಬೆಂಡಜಿಮ್ 4 ಗ್ರಾಂ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಅಥವಾ ಟ್ರೈಸೈಕ್ಲೆಜೋಲ್ 0.6 ಗ್ರಾಂ ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಅಥವಾ ಎಡಿಫೆನ್‌ಪೋಸ್ 1 ಮೀಲೀ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಸುಮಾರು 250-300 ಲೀಟರ್ ಔಷಧಿಯ ದ್ರಾವಣ ಒಂದು ಎಕರೆಗೆ ಬೇಕಾಗುತ್ತದೆ.

ಭತ್ತ ತೆಂಡೆ ಹೊಡೆಯುವ ಗಂತದಲ್ಲಿದ್ದು ಕಾಂಡ ಕೊರಕ ಹತೋಟಿಗಾಗಿ ಮಾನೋಕ್ರೋಟೊಫಾಸ್ 1.5 ಮೀ ಲೀ ಅಥವಾ ಕ್ಲೋರೋಪೈರಿಫಾಸ್ 2 ಮೀಲೀ ಔಷಧಿಯನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಸುಮಾರು 250-300 ಲೀಟರ್ ಔಷಧಿಯ ದ್ರಾವಣ ಒಂದು ಎಕರೆಗೆ ಬೇಕಾಗುತ್ತದೆ.

ಈ ಕೇಂದ್ರದಲ್ಲಿ ಎರೆಹುಳುಗಳು ಕೆ.ಜಿಗೆ 500ರೂ, ಹಾಗೂ ಉತ್ತಮ ಗುಣಮಟ್ಟದ ಚಕ್ತಮುನಿ,ಛಾಯಾ, ಹಿಪ್ಪುನೇರಳೆ (ವಿ-5), ಇನ್ಸುಲಿನ್, ಗ್ಲಿರಿಸೀಡಿಯಾ ಮತ್ತು ನುಗ್ಗೆ(ಪಿ.ಕೆ.ಎಂ-೧) ಸಸಿಗಳು ಮಾರಾಟಕ್ಕೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ದೂರವಾಣಿ ಮೂಲಕ ಡಾ.ಪಿ.ಪ್ರಕಾಶ್, ಹಿರಿಯ ಕ್ಷೇತ್ರ ಅಧೀಕ್ಷಕರು/  ಎನ್.ನರೇಂದ್ರಬಾಬು, ಸಹ ಸಂಶೋಧಕರು, ದೂರವಾಣಿ ಸಂಖ್ಯೆ.  9449869914/ 08212591267ನ್ನು   ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: