ಮೈಸೂರು

ಉದ್ದಿಮೆ ರಹದಾರಿ ಅದಾಲತ್ ಗೆ ಚಾಲನೆ

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ದೇವರಾಜ ಮಾರುಕಟ್ಟೆಯ ಚಿಕ್ಕ ಗಡಿಯಾರ ಬಳಿ ಉದ್ದಿಮೆ ರಹದಾರಿ ಅದಾಲತ್ ಗೆ ಚಾಲನೆ ನೀಡಲಾಯಿತು.

ಅದಾಲತ್ ಗೆ ಮೇಯರ್ ರವಿಕುಮಾರ್ ಚಾಲನೆ ನೀಡಿದರು. ಮೂರು ದಿನಗಳ ಕಾಲ ನಡೆಯಲಿರುವ ಟ್ರೇಡ್ ಲೈಸೆನ್ಸ್ ನ ಈ ಅದಾಲತ್ ನಲ್ಲಿ  ಅಂಗಡಿಯ ಮಾಲಿಕರು ಸ್ಥಳದಲ್ಲಿಯೇ ತಮ್ಮ ಲೈಸೆನ್ಸ್ ನ್ನು  ನವೀಕರಣ ಮಾಡಿಸಿಕೊಳ್ಳಬಹುದಾಗಿದೆ. ಹೊಸ ಟ್ರೇಡ್ ಲೈಸೆನ್ಸ್ ಪಡೆಯಲು ಇಚ್ಛಿಸುವವರು ಸ್ಥಳದಲ್ಲೇ ಹೊಸ ಅರ್ಜಿಯನ್ನು ನೀಡಿ ಪರವನಾಗಿ ಪಡೆಯಲು ಈ ಅದಾಲತ್ ನ್ನು ಆಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು. ಇದೇವೇಳೆ ಕಾರ್ಯಕ್ರಮದಲ್ಲಿ ವಲಯ ಕಚೇರಿ 6ರ ಸಹಾಯಕ ಆಯುಕ್ತ ಸೋಮಶೇಖರ್, ಎ.ಆರ್‌.ಓ ಸಿದ್ದರಾಜು, ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಎಸ್.ಸುಧಾ, ಪಾಲಿಕೆ ಅಧಿಕಾರಿ ನಂದೀಶ್ ಸೇರಿದಂತೆ ಹಲವರು ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: