ಪ್ರಮುಖ ಸುದ್ದಿ

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮದಕರಿ ನಾಯಕರ ಹೆಸರಿನ ನಾಮಪಲಕ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಮಂಡ್ಯ),ನ.6:- ರಾಜಾ  ಮದಕರಿ ನಾಯಕ ಭೌಗೋಳಿಕವಾಗಿ ಲೀನವಾದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮದಕರಿ ನಾಯಕರ ಹೆಸರಿನ ನಾಮಪಲಕ ಅಳವಡಿಸುವಂತೆ ಒತ್ತಾಯಿಸಿ ಮೈಸೂರು ನಾಯಕರ ಪಡೆ ವತಿಯಿಂದ ಶ್ರೀರಂಗಪಟ್ಟಣದ ಪುರಸಭೆ ಬಳಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ರಾಜಾ  ಮದಕರಿ ನಾಯಕನ್ನು ಟಿಪ್ಪು ಸುಲ್ತಾನ್ ಮೋಸದಿಂದ ಸೆರೆಹಿಡಿದು ಆತನನ್ನು ಶ್ರೀರಂಗಪಟ್ಟಣದಲ್ಲಿ ಸೆರೆಹಿಡಿದು ಬಂಧಿಸಿ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ.  ಮೃತದೇಹವನ್ನು ಅವರೊಂದಿಗೆ ಬಂದ ಬೇಡರ ಪಡೆ ಪಶ್ಚಿಮ ವಾಹಿನಿಯಲ್ಲಿ ಲೀನಮಾಡಿದ ಸ್ಥಳ ಅವರು ಮೃತರಾಗಿ 237 ವರ್ಷ ಕಳೆದರೂ ಸಹ ಅವರ ಹೆಸರಿನ ಬೋರ್ಡ್ ಇಲ್ಲದಿರುವುದು ದುರಂತ. ಕೂಡಲೇ ಪುರಸಭೆಯ ವತಿಯಿಂದ ನಾಮಪಲಕ ಹಾಕಿ ಗೌರವಿಸುವಂತೆ ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.

ಅಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ, ಪುರಸಭಾ ಸದಸ್ಯರಾದ ಶ್ರೀನಿವಾಸ, ಶಿವಣ್ಣ,ರಂಗಸ್ವಾಮಿ, ಚಂದ್ರಶೇಖರ, ತಿಮ್ಮನಾಯಕ, ಗೋವಿಂದರಾಜು,ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: