ಮೈಸೂರು

ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅಂಗೀಕರಿಸಿ, ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮಾದಿಗ ಯುವಸೇನೆ ವತಿಯಿಂದ ಬುಧವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್ ಮನವಿ ಸ್ವೀಕರಿಸಿದರು. ಪರಿಶಿಷ್ಟ ಜಾತಿಗಳಿಗೆ ವೈಜ್ಞಾನಿಕ ಮೀಸಲಾತಿ ನೀಡುವಂತೆಯೂ ಪ್ರತಿಭಟನಾಕಾರರು ಮನವಿ ಮಾಡಿದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಸ್ವಾಮಿ, ರಾಘವೇಂದ್ರ, ಮೋಹನ್, ನಂದನ್, ರಘು, ಮಂಜುನಾಥ್ ಸೇರಿದಂತೆ ಮಾದಿಗ ಯುವಸೇನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆಗೂ ಮುನ್ನ ಬೈಕ್ ರ್ಯಾಲಿ ನಡೆಸಲಾಗಿತ್ತು..

Leave a Reply

comments

Related Articles

error: