ಮೈಸೂರು

ಗೀತಾ ಮಹದೇವ್ ಪ್ರಸಾದ್ ಭೇಟಿ ಮಾಡಿದ ದಿಗ್ವಿಜಯ್ ಸಿಂಗ್

ಮಾಜಿ ಸಚಿವ ದಿವಂಗತ ಎಚ್.ಎಸ್ ಮಹದೇವಪ್ರಸಾದ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯಸಿಂಗ್ ದಿಢೀರ್ ಭೇಟಿ ನೀಡಿದ್ದು  ರಾಜಕೀಯ ವಲಯದಲ್ಲಿ ತೀವ್ರ ಕೂತೂಹಲ ಮೂಡಿಸಿದೆ.
ಮೈಸೂರಿನ ಕುವೆಂಪುನಗರದಲ್ಲಿರುವ ದಿ.ಎಚ್.ಎಸ್ ಮಹದೇವಪ್ರಸಾದ್ ಅವರ ನಿವಾಸಕ್ಕೆ ಬುಧವಾರ ದಿಗ್ವಿಜಯ್ ಸಿಂಗ ಭೇಟಿ ನೀಡಿದರು. ಮಹದೇವಪ್ರಸಾದ್ ಪತ್ನಿ ಗೀತಾರವರ ಜೊತೆ ಸುದೀರ್ಘ ಮಾತುಕತೆ ನಡೆಸಿದರು.ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ  ಮಹದೇವ್ ಪ್ರಸಾದ್ ಪತ್ನಿ ಗೀತಾ ಚುನಾವಣಾ ಕಣಕ್ಕಿಳಿಯುತ್ತಾರೆಂಬ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ದಿಗ್ವಿಜಯ್ ಸಿಂಗ್ ಭೇಟಿ ನೀಡಿರಬಹುದು ಎನ್ನಲಾಗುತ್ತಿದೆ.

Leave a Reply

comments

Related Articles

error: