ಮೈಸೂರು

ಕಂತಿನ ಹಣ ವಸೂಲು ಮಾಡಿ ಮನೆ ಮುಂದೆ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ವೇಳೆ ಹಣ ಕಿತ್ತು ಪರಾರಿಯಾದ ದುಷ್ಕರ್ಮಿಗಳು

ಮೈಸೂರು,ನ.7:- ವ್ಯಕ್ತಿಯೋರ್ವರು ಮನೆಗೆ ಅಡ್ವಾನ್ಸ್ ಕೊಡಲು ಜನರಿಂದ ಕಂತಿನ ಹಣ ವಸೂಲು ಮಾಡಿ ಮನೆ ಮುಂದೆ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿಗಳಿಬ್ಬರು ಬಂದು ಚಾಕು ತೋರಿಸಿ ಬೆದರಿಸಿ ಹಣ ಕಿತ್ತುಕೊಂಡು ಹೋದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ಹಣ ಕಳೆದುಕೊಂಡ ಪಳನಿಸ್ವಾಮಿ ಎಂಬವರು  ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ಮನೆಗೆ ಅಡ್ವಾನ್ಸ್‌ ಕೊಡಲು 40,000ರೂ. ನಗದು ಹಣವನ್ನು ತೆಗೆದುಕೊಂಡು ಹಾಗೆಯೇ ಜನರಿಂದ ಕಂತಿನ ಹಣ ವಸೂಲಿಗೆ   ತಮ್ಮ ದ್ವಿಚಕ್ರ ವಾಹನ ಕೆಎ-45-ಯು-8232 ರಲ್ಲಿ ಶಾಂತಿನಗರಕ್ಕೆ ಬಂದು ಕೆಲವರಿಂದ ಹಣ ವಸೂಲಿ ಮಾಡಿಕೊಂಡು ಬೆಳಿಗ್ಗೆ ಸುಮಾರು 10.20 ರಲ್ಲಿ ಶಾಂತಿನಗರದ 17ನೇ ಕ್ರಾಸ್‌‌ ನಲ್ಲಿರುವ ವ್ಯಕ್ತಿಯೋರ್ವರ ಹತ್ತಿರ ಕಂತಿನ ಹಣ ವಸೂಲಿಗಾಗಿ ಮನೆ ಮುಂದೆ ಬೈಕ್‌ ನಿಲ್ಲಿಸಿಕೊಂಡು ಮಾತನಾಡುತ್ತಿದ್ದಾಗ ಒಂದು ಕೆಂಪು ಕಲರ್‌‌ನ ಡಿಯೋ ಸ್ಕೂಟರ್‌ನಲ್ಲಿ ಇಬ್ಬರು ಅಸಾಮಿಗಳು ಬಂದು ಏಕಾಏಕಿ  ಬಲಗೈಯನ್ನು ಹಿಡಿದು ಹಿಂಭಾಗಕ್ಕೆ ತಿರುಗಿಸಿ ಹಿಡಿದುಕೊಂಡು “ಯಾರೋ ನೀನು ? ಎಷ್ಟು ಹಣ ಇಟ್ಟಿದ್ದೀಯಾ ? ಹಣ ತೆಗಿ” ಎಂದು ಏರಿದ ದ್ವನಿಯಲ್ಲಿ ಹೇಳಿದ್ದು,  ಅದಕ್ಕೆ ಪ್ರತಿಯಾಗಿ ನೀವು ಯಾರು ? ಎಂದು ಕೇಳಿದಕ್ಕೆ ಅವರಿಬ್ಬರೂ ಒಂದು ಉದ್ದದ ಚಾಕುವನ್ನು ತೆಗೆದು ಹಣ ಕೊಡು ಇಲ್ಲದಿದ್ದರೆ ಸಾಯಿಸಿಬಿಡುತ್ತೇವೆ, ಎಂದು ಹೆದರಿಸಿ ಎಡಪಕ್ಕೆಗೆ ಬಲವಾಗಿ ಕೈಮುಷ್ಠಿಯಿಂದ ಗುದ್ದಿ,   ಪ್ಯಾಂಟ್‌ನ ಸೀಕ್ರೇಟ್‌ ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ಅಡ್ವಾನ್ಸ್‌‌ ಹಣ 40,000ರೂ. ಮತ್ತು ಜನರಿಂದ ವಸೂಲಿ ಮಾಡಿ ರೆಗ್ನಿನ್‌ ಪರ್ಸ್‌ನಲ್ಲಿಟ್ಟಿದ್ದ ಕಂತಿನ ಹಣ ಸುಮಾರು 10,000ರೂ. ಶರ್ಟ್‌ ಜೇಬಿನಲ್ಲಿದ್ದ ವಿವೋ ಮೊಬೈಲ್‌ ನ್ನು ಬಲವಂತವಾಗಿ ಕಿತ್ತುಕೊಂಡಿದ್ದಲ್ಲದೆ ಚಾಕುವಿನ ಹಿಂಭಾಗದ ಹಿಡಿ ಭಾಗದಿಂದ   ತಲೆಯ ಹಿಂಭಾಗ ಹೊಡೆದು  ಗಾಯ ಮಾಡಿದ್ದಾರೆ. ಇಬ್ಬರು ಅಸಾಮಿಗಳು   ಸುಮಾರು 50,000ರೂ. ಹಣದೊಂದಿಗೆ ಪರಾರಿಯಾಗಿದ್ದಾರೆಂದು   ದೂರಿನಲ್ಲಿ ತಿಳಿಸಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: