ಮನರಂಜನೆ

`ಕೆಜಿಎಫ್ 2’ ನ ಬಿಜಿಎಂ ಝಲಕ್ ಶೇರ್ ಮಾಡಿದ ಪ್ರಶಾಂತ್ ನೀಲ್

ಬೆಂಗಳೂರು,ನ.7-ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಿತ್ತು. ಇದೀಗ ಕೆಜಿಎಫ್-2 ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್, ಚಾಪ್ಟರ್-2 ಬಿಜಿಎಂ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 ಚಿತ್ರದ ಬಿಜಿಎಂ ಹೇಗಿರಲಿದೆ ಎನ್ನುವ ಒಂದು ಚಿಕ್ಕ ಝಲಕ್ ಅನ್ನು ಶೇರ್ ಮಾಡಿದ್ದಾರೆ.

ಸದ್ಯ ಚಿತ್ರದ ಟ್ಯೂನ್ ಕೆಲಸಗಳು ನಡೆಯುತ್ತಿವೆ. ಅತ್ಯುತ್ತಮ ಬಿಜಿಎಂಗಳಲ್ಲಿ ಒಂದಾಗಿರುವ “ಭೀಕರ ಇವ ಭೋರ್ಗರ…”ಎನ್ನುವ ಟ್ಯ್ರಾಕ್ ಅನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಕೆಜಿಎಫ್-2 ಚಿತ್ರದಿಂದ ಯಾವುದೇ ಅಪ್ ಡೇಟ್ ಸಿಗುತ್ತಿಲ್ಲ ಅಭಿಮಾನಿಗಳು ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೂ ಮುಂಚೆ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಚಿತ್ರತಂಡ ಸೇರಿಕೊಂಡಿರುವ ವಿಚಾರ ಹಂಚಿಕೊಂಡಿದ್ದರು.

ಸದ್ಯ ಕೆಜಿಎಎಫ್-2 ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಲಾಗಿದೆ. ಯಶ್ ಕಳೆದ ಕೆಲವು ದಿನಗಳಿಂದ ಚಿತ್ರೀಕರಣಕ್ಕೆ ರಜೆ ಹಾಕಿ ರಾಧಿಕಾ ಕೇರಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಎರಡನೆ ಬಾರಿ ತಂದೆಯಾಗಿರುವ ಖುಷಿಯಲ್ಲಿರುವ ಯಶ್ ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದಾರೆ. ಚಾಪ್ಟರ್-1 ಗಿಂತ ಚಾಪ್ಟರ್-2 ಮತ್ತಷ್ಟು ಭಯಾನಕವಾಗಿರಲಿದೆಯಂತೆ. (ಎಂ.ಎನ್)

Leave a Reply

comments

Related Articles

error: