ಮನರಂಜನೆ

ಚಿತ್ರ ಜಗತ್ತಿಗೆ ಬರುವುದಕ್ಕೂ ಮುನ್ನ ಯೋಗ ಕಲಿಸುತ್ತಿದ್ದರಂತೆ ಬಾಹುಬಲಿ ಖ್ಯಾತಿಯ ಬೆಡಗಿ ಅನುಷ್ಕಾ ಶೆಟ್ಟಿ !

ದೇಶ(ನವದೆಹಲಿ)ನ.7:-   ಬಾಹುಬಲಿ ಖ್ಯಾತಿಯ  ನಟಿ ಅನುಷ್ಕಾ ಶೆಟ್ಟಿ ತಮ್ಮ 37 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳ ಈ ಸೂಪರ್ ಸ್ಟಾರ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅದಕ್ಕಾಗಿಯೇ ಅವರನ್ನು ದಕ್ಷಿಣ ಸಿನೆಮಾದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತದೆ. ಅವರು ಯೋಗದ ಬಗ್ಗೆ ಒಲವು ಹೊಂದಿದ್ದಾರೆ ಎಂಬುದು ಅನುಷ್ಕಾ ಅವರ ಅಭಿಮಾನಿಗಳಿಗೆ ತಿಳಿದಿದೆ. ಆದರೆ ಚಲನಚಿತ್ರಗಳ ಜಗತ್ತಿಗೆ ಬರುವ ಮೊದಲು, ಅವರು ಯೋಗ ಕಲಿಸುವ ಶಿಕ್ಷಕರಾಗಿದ್ದರು. ಅಷ್ಟೇ ಅಲ್ಲ ಅವರು ಸ್ವೀಟಿ ಎಂದು ಕರೆಯಲ್ಪಟ್ಟವರು.

ಅವರ ಕುಟುಂಬ ಸದಸ್ಯರು ಯಾರೂ ಚಲನಚಿತ್ರ ಹಿನ್ನೆಲೆಯಿಂದ ಬಂದವರಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅನುಷ್ಕಾ ಯೋಗ ಗುರು ಭರತ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಯೋಗ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ನಿರ್ದೇಶಕರ ಗಮನ ಸೆಳೆದಿದ್ದು,  ಅವರು   ಅನುಷ್ಕಾ ಅವರಿಗೆ ಚಿತ್ರಕ್ಕಾಗಿ ಆಫರ್ ನೀಡಿದರು.

ಅನುಷ್ಕಾ ಇದುವರೆಗೆ 50 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಎಸ್.ರಾಜಮೌಳಿ ಅವರ ಬಾಹುಬಲಿ ದಿ ಬಿಗಿನಿಂಗ್, ಮತ್ತು ಬಾಹುಬಲಿ ದಿ ಕನ್‌ಕ್ಲೂಷನ್ ಚಿತ್ರಗಳಲ್ಲಿ ಅವರು ದೇವಸೇನಾ ಪಾತ್ರವನ್ನು ನಿರ್ವಹಿಸಿದ್ದರು, ನಂತರ ಅವರು ದಕ್ಷಿಣ ಚಿತ್ರೋದ್ಯಮದ ಹೊರಗೂ ಗುರುತಿಸಲ್ಪಟ್ಟರು.

142 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಹೊಂದಿದ್ದು,    ಅನುಷ್ಕಾ ತನ್ನ ಜನ್ಮದಿನದಂದು ತನ್ನ ಕಾರು ಚಾಲಕನಿಗೆ 12 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ನೀಡಿದ್ದರು ಎನ್ನಲಾಗಿದೆ. 2005 ರಲ್ಲಿ ತೆಲುಗು ಚಿತ್ರ ‘ಸೂಪರ್’ ಮೂಲಕ ಅಭಿನಯಕ್ಕಿಳಿದು, ನಂತರ ಹಿಂತಿರುಗಿ ನೋಡಲಿಲ್ಲ. ಅನುಷ್ಕಾ ಇಂದು ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಅವರು ಹೈದರಾಬಾದ್ ನ ಐಷಾರಾಮಿ ಪ್ರದೇಶವಾದ ಜುಬಿಲಿ ಹಿಲ್ಸ್ ನಲ್ಲಿರುವ ವುಡ್ಸ್ ಅಪಾರ್ಟ್ಮೆಂಟ್ ನ ಆರನೇ ಮಹಡಿಯಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ.   ಐಷಾರಾಮಿ ಕಾರುಗಳ ಬಗ್ಗೆ ಒಲವು ಹೊಂದಿದ್ದು, ಬಿಎಂಡಬ್ಲ್ಯು 6, ಆಡಿ ಎ 6, ಆಡಿ ಕ್ಯೂ 5 ಮತ್ತು ಟೊಯೋಟಾ ಕೊರೊಲ್ಲಾ ಸೇರಿದಂತೆ ಹಲವಾರು ದೊಡ್ಡ ಬ್ರಾಂಡ್‌ಗಳ ಕಾರುಗಳನ್ನು ಹೊಂದಿದ್ದಾರೆ.

ಅನುಷ್ಕಾ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣವನ್ನು ಪಡೆದಿದ್ದು, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬಿಸಿಎ ಪದವಿ ಪಡೆದರು.   (ಎಸ್.ಎಚ್)

Leave a Reply

comments

Related Articles

error: