ಕ್ರೀಡೆ

ಮೇರಿ ಕೋಮ್ ಗೆ `ಒಲಿಂಪಿಯನ್’ ಗೌರವ

ನವದೆಹಲಿ,ನ.7-ಆರು ಬಾರಿಯ  ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕೋಮ್ ಗೆ ಅಂತಾರಾಷ್ಟ್ರೀಯ ಒಲಿಂಪಿಯನ್ ಸಂಸ್ಥೆ (ಡಬ್ಲ್ಯುಒಎ) ‘OLY’ (ಒಲಿಂಪಿಯನ್) ಸ್ಥಾನಮಾನದ ಪಟ್ಟ ನೀಡಿ ಗೌರವಿಸಿದೆ.

ಸ್ವತಃ ಮೇರಿ ಕೋಮ್ ಅವರೇ ಟ್ವಿಟರ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಕೂಟಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಯನ್ ಸಂಸ್ಥೆಯು ಹೆಸರಿನ ಜತೆಗೆ ನೀಡುವ ಗೌರವ ಇದಾಗಿದೆ. ಈ ಗೌರವಕ್ಕೆ ಭಾಜನರಾದ ಕ್ರೀಡಾಪಟುಗಳು ಹೆಸರಿನ ಬಳಿಕ ಈ ವಿಶಿಷ್ಟ ಒಲಿಂಪಿಯನ್ ಪಟ್ಟದ ಸ್ಥಾನಮಾನದ ಅರ್ಹವಾಗಿದ್ದಾರೆ. ಇದರೊಂದಿಗೆ ಓರ್ವ ಒಲಿಂಪಿಯನ್ ಆಗಿ ಸಮಾಜದಲ್ಲಿ ಒಲಿಂಪಿಕ್ ಮೌಲ್ಯವನ್ನು ಹೆಚ್ಚಿಸಲು ಜವಾಬ್ದಾರಿ ಹೆಚ್ಚಲಿದೆ.

ಇತ್ತೀಚೆಗಷ್ಟೇ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ವಿವಾದಾತ್ಮಕ ಸೆಮಿಫೈನಲ್ ಪಂದ್ಯದ ತೀರ್ಪನ್ನು ಮರು ಪರಿಶೀಲಿಸುವಂತೆ ಮೇರಿ ಕೋಮ್ ಮನವಿ ಮಾಡಿದ್ದರು. ಆದರೆ ಮೇರಿ ಕೋಮ್ ಕೋರಿಕೆಯನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ತಾಂತ್ರಿಕ ಸಮಿತಿ ತಳ್ಳಿ ಹಾಕಿತ್ತು.

ಹಾಗಿದ್ದರೂ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ದಾಖಲೆಯ ಎಂಟು ಬಾರಿ ಪದಕ ಗೆದ್ದಿರುವ ಮೊತ್ತ ಮೊದಲ ಹಾಗೂ ಏಕೈಕ ಮಹಿಳಾ ಬಾಕ್ಸರ್ ಎಂಬ ದಾಖಲೆಗೆ ಭಾಜನವಾಗಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಗುರಿಯಿರಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: