ಸುದ್ದಿ ಸಂಕ್ಷಿಪ್ತ

ದಿ.10ರಂದು ನಾಡು-ನುಡಿ ಸಾಧಕರ ಚಿತ್ರಕಲಾ ಪ್ರದರ್ಶನ

ಮೈಸೂರು.ನ.7 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ 64ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚಿತ್ರಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರ ನಾಡು-ನುಡಿ ಸಾಧಕರು ಚಿತ್ರಕಲಾ ಪ್ರದರ್ಶನವನ್ನು ನ.10ರಂದು ಕಲಾಮಂದಿರದ ಸುಚಿತ್ರ ಕಲಾಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 6.30ಕ್ಕೆ ಅಂಕರಣಕಾರ ಡಾ.ಗುಬ್ಬಿಗೂಡು ರಮೇಶ್ ಚಾಲನೆ ನೀಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಕ್ರೀಡಾಪಟು ವಿಜಯಾ ರಮೇಶ್ , ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಕಲಾವಿದೆ ಮೋಹನ್ ಹಾಜರಿರಲಿದ್ದಾರೆ. ಅಂದು ಸಮಜೆ 7ರವರೆಗೆ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿರಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: