ಪ್ರಮುಖ ಸುದ್ದಿ

ಮಾಂದಲಪಟ್ಟಿಯಲ್ಲಿ ನಿಯಮ ಉಲ್ಲಂಘನೆಯಾದರೆ ಸಂಚಾರ ರದ್ದು : ಷರತ್ತುಗಳೊಂದಿಗೆ ಜೀಪುಗಳ ಸಂಚಾರಕ್ಕೆ ಅನುಮತಿ

ರಾಜ್ಯ( ಮಡಿಕೇರಿ) ನ.8 :- ಪ್ರವಾಸಿ ತಾಣ ಮಾಂದಲ್ ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಜೀಪುಗಳಿಗೆ ಸದ್ಯಕ್ಕೆ ಮಾನವೀಯ ದೃಷ್ಟಿಯಿಂದ ಕೆಲವೊಂದು ಷರತ್ತುಗಳೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜೀಪು ನಿಲುಗಡೆ ಸ್ಥಳ ಹಾಗೂ ಬಾಡಿಗೆ ನಿಗದಿ ಮಾಡಿರುವ ಜಿಲ್ಲಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದಲ್ಲಿ ಸಂಚಾರ ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ.

ಮಾಂದಲ್ ಪಟ್ಟಿ ಪ್ರವಾಸಿ ತಾಣಕ್ಕೆ ಖಾಸಗಿ ಜೀಪುಗಳ ಸಂಚಾರ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ ಅವರ ಉಪಸ್ಥಿತಿಯಲ್ಲಿ ಪ್ರವಾಸಿ ಜೀಪು ಮಾಲಿಕರು, ಗ್ರಾಮಸ್ಥರು, ಗ್ರಾ.ಪಂ., ಅಧಿಕಾರಿಗಳು ಒಳಗೊಂಡ ಸಭೆಯು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಮಾಂದಲ್ಪಟ್ಟಿಯಲ್ಲಿ ಜೀಪು ಚಾಲಕರು ವೇಗವಾಗಿ ಹೋಗುತ್ತಿರುವುದನ್ನು ಒಪ್ಪಿಕೊಂಡರಲ್ಲದೆ ತಿಂಗಳಿಗೊಮ್ಮೆ ಸಭೆ ನಡೆಸಿ ಸ್ಥಳಿಯರು ಮಾತ್ರ ಜೀಪು ಚಲಾಯಿಸಬೇಕು. ಚಾಲಕರನ್ನು ಇಟ್ಟ್ಟುಕೊಳ್ಳಬಾರದೆಂದು ತೀರ್ಮಾನಿಸಿರುತ್ತದೆ ಆದರೂ ಕೆಲವರು ಚಲಾಯಿಸುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.

ಗ್ರಾಮಸ್ಥರು ಪ್ರತಿಕ್ರಿಯಿಸಿ ಗ್ರಾಮದ ರಸ್ತೆಯಲ್ಲಿ ವೇಗಕ್ಕೆ ಕಡಿವಾಣ ಹಾಕಬೇಕು. ರಸ್ತೆ ಸರಿ ಮಾಡಿಸಿಕೊಡಬೇಕು ಸಮಸ್ಯೆಗೆ ಶಾಶ್ವತ ಪರಿಹಾರಬೇಕೇಂದು ಒತ್ತಾಯಿಸಿದರು.

ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾನವೀಯ ನೆಲೆಯಲ್ಲಿ ಇದೊಂದು ಬಾರಿ ಜೀಪು ಚಲಾಯಿಸಲು ಅವಕಾಶ ನೀಡಲಾಗುವುದು. ಆದರೆ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ ಅನುಮತಿ ನೀಡುವ ಹಳದಿ ಬಣ್ಣ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶವಿದೆ. ಬಿಳಿ ಬಣ್ಣದ ಫಲಕದ ವಾಹನಗಳಿಗೆ ಅವಕಾಶವಿಲ್ಲ. ಬಾಡಿಗೆ ಮಾಡುವ ಜೀಪುಗಳು ನಗರದ ಜೀಪು ನಿಲ್ದಾಣದಿಂದಲೇ ಹೊರಡಬೇಕು,.ಈ ಹಿಂದಿನ ಮಾರ್ಗಸೂಚಿಯಂತೆ ರಾಜಾಸೀಟ್ ಮಾರ್ಗವಾಗಿ ಇತರರಿಗೆ ತೊಂದರೆಯಾಗದಂತೆ ಸಾಗಬೇಕು. ಎ.ವಿ.ಶಾಲೆ ಬಳಿಯಿಂದ ನಂದಿಮೊಟ್ಟೆ ಸೇರಿದಂತೆ ಮಾಂದಲ್‍ಪಟ್ಟಿ ಗೇಟ್‍ವರೆಗೆ ಎಲ್ಲಿಯೂ ಜೀಪುಗಳನ್ನು ನಿಲುಗಡೆಗೊಳಿಸಬಾರದು ಎಂದರು.

ರಸ್ತೆಯುದ್ದಕ್ಕೂ 30 ರಿಂದ 40 ಕಿ.ಮೀ ವೇಗದಲ್ಲಿಯೇ ಚಲಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದರು. ವೇಗವಾಗಿ ಚಲಿಸುವ ಬಗ್ಗೆ ಅಥವಾ ಅವಘಡವಾದಲ್ಲಿ ಗಮನವಿರಿಸಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಗ್ರಾಮಾಂತರ ಪೊಲೀಸರು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು. ಅಲ್ಲದೆ ಗಾಮಸ್ಥರಿಂದ ದೂರು ಬಂದಲ್ಲಿ ಸಂಚಾರ ರದ್ದುಪಡಿಸಲಾಗುವುದು. ಈ ಸಂಬಂಧ ಪ್ರತಿ ತಿಂಗಳು ಸಭೆ ನಡೆಸುವುದಾಗಿ ಹೇಳಿದರು.

ಮಡಿಕೇರಿ ಜೀಪು ನಿಲ್ದಾಣದಿಂದ ಹೊರಡುವ ಜೀಪುಗಳಿಗೆ ಈ ಹಿಂದಿನ ನಿರ್ಣಯದಂತೆ ರೂ. 1100 ಹಾಗೂ ಮಾಂದಲ್ಪಟ್ಟಿ ಗೇಟ್ ಬಳಿಯಿಂದ ಒಳಗಡೆ ಕರೆದೊಯ್ಯಲು ರೂ.300 ಮಾತ್ರ ಬಾಡಿಗೆ ವಸೂಲಿ ಮಾಡಬೇಕು. ನಿಗದಿತ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು, ನಿಗದಿತ ಸ್ಥಳಗಳಲ್ಲಿ ದರ ಫಲಕ ಅಳವಡಿಸುವಂತೆ ಕೆ. ನಿಡುಗಣೆ ಗ್ರಾ.ಪಂ.ಗೆ ಸೂಚಿಸಿದರು.

ದರ ಫಲಕಕ್ಕೆ ಹಾನಿಯುಂಟು ಮಾಡಿದರೆ ಜೀಪು ಚಾಲಕರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು. ಮಾಂದಲ್ ಪಟ್ಟಿಯವರೆಗೆ ರಸ್ತೆ ಅಬಿವೃದ್ಧಿ ಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಸಿಗರಿಗೆ ಯಾವುದೇ ವಿಧದಲ್ಲೂ ಅನಾನುಕೂಲ ಉಂಟಾಗದಂತೆ ಜೀಪು ಚಾಲಕರು ಗಮನಹರಿಸಬೇಕು. ಮಾಂದಲ್ಪಟ್ಟಿ ನಿರ್ವಹಣೆ ಮತ್ತು ಮೇಲುಸ್ತುವಾರಿ ಮಾಡಲು ಪ್ರವಾಸೋದ್ಯಮ ಇಲಾಖೆಯು ಗ್ರಾ.ಪಂ.ನಿಂದ ಇಬ್ಬರು ಸದಸ್ಯರು, ವಾಹನ ಮಾಲಿಕರ ಸಂಘದಿಂದ ಇಬ್ಬರು ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ,  ಅರಣ್ಯ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್

Leave a Reply

comments

Related Articles

error: