ಮೈಸೂರು

ದರೋಡೆ ಮಾಡಿದ್ದ ವ್ಯಕ್ತಿಯ ಬಂಧನ : ಕೃತ್ಯಕ್ಕೆ ಬಳಸಿದ್ದ ಕಾರು, ಒಂದು ದ್ವಿಚಕ್ರ ವಾಹನ ನಗದು ವಶ

ಮೈಸೂರು,ನ.8:-   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ಕಳುವು, ದರೋಡೆಯದ್ದೇ ಸುದ್ದಿ.  ಕಳ್ಳತನ ಕೃತ್ಯವೆಸಗಲು ಕದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದ ಖದೀಮರು, ಈಗ ಆನ್‌ಲೈನ್‌ ಮೂಲಕ ಕಾರು ಬುಕ್‌ ಮಾಡಿಕೊಂಡು ಹೋಗುವ ಮಟ್ಟಿಗೆ ಅಪ್‌ಡೇಟ್‌ ಆಗಿದ್ದು, ಇದೀಗ ಓರ್ವ ಪೊಲೀಸರ ಅತಿಥಿ ಯಾಗಿದ್ದಾನೆ.

04.11.2019 ರಂದು ಎನ್.ಆರ್.ಪೊಲೀಸ್ ಠಾಣಾ ಸರಹದ್ದು, ಎಲ್.ಐ.ಸಿ ವೃತ್ತದ ಬಳಿ ಸೇಂಟ್ ಫಿಲೋಮಿನಾ ಪಿ.ಯು ಕಾಲೇಜಿನ ಮುಂಭಾಗ 3 ಜನ ಹುಡುಗರು ಆನ್ ಲೈನ್ ಮುಖಾಂತರ ಜೂಮ್ ಕಂಪನಿಯಿಂದ ಬುಕ್ ಮಾಡಿದ್ದ ಒಂದು ಮಾರುತಿ ಸುಜುಕಿ ಬ್ರಿಜ್ ಕಾರಿನಲ್ಲಿ ಬಂದು ಮುಂದೆ ಹೋಂಡಾ ಡಿಯೋ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಅಮಲ್ ಎಂಬವರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ   85,000ರೂ. ನಗದು ಹಣವನ್ನು ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಎನ್ ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಮ್ಮದ್ ಸಿದ್ದಿಖ್ @ ಮೌಲಿ ಬಿನ್ ಲೇಟ್ ಮಹಮ್ಮದ್ ಅನ್ಸರ್, (20), 7ನೇ ಕ್ರಾಸ್, ಇಂದಿರಾ ಗಾಂಧಿ ರಸ್ತೆ, ಗೌಸಿಯಾನಗರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು,  ಈತನೊಂದಿಗೆ ಇನ್ನು 4 ಜನರು ಭಾಗಿಯಾಗಿದ್ದಾರೆಂಬುದು ತಿಳಿದು ಬಂದಿದೆ. ಅವರು ತಲೆಮರೆಸಿಕೊಂಡಿರುತ್ತಾರೆ. ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಅಪ್ಪಾಚೆ ಆರ್.ಟಿ.ಆರ್ 180 ಬೈಕನ್ನು ವಶಪಡಿಸಿಕೊಂಡಿದ್ದು, ಈ ಬೈಕ್‍ನ್ನು ಶ್ರೀರಂಗಪಟ್ಟಣದ ಕರಿಘಟ್ಟ ದೇವಸ್ಥಾನದ ಬಳಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಸುಜುಕಿ ಬ್ರಿಜ್ ಕಾರು, ಒಂದು ಟಿ.ವಿ.ಎಸ್ ಅಪ್ಪಾಚೆ ಆರ್.ಟಿ.ಆರ್-180 ಬೈಕ್, ನಗದು ಹಣ   2500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ

. ಇವುಗಳ ಒಟ್ಟು ಮೌಲ್ಯ   10,52,500ರೂ. ಆಗಿರುತ್ತದೆ. ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ)   ಬಿ.ಟಿ. ಕವಿತ  ಮತ್ತು ನರಸಿಂಹರಾಜ ವಿಭಾಗದ ಎ.ಸಿ.ಪಿ.   ಶಿವಶಂಕರ್   ಮಾರ್ಗದರ್ಶನದಲ್ಲಿ ಎನ್.ಆರ್ ಠಾಣಾ ಪೊಲೀಸ್ ಇನ್ಸಪೆಕ್ಟರ್ ಬಿ.ಬಸವರಾಜು, ಪಿ.ಎಸ್.ಐ ಅನಿಲ್, ಎ.ಎಸ್.ಐ ಆನಂದ್ ಹಾಗೂ ಸಿಬ್ಬಂದಿಗಳಾದ ರಮೇಶ, ಮಂಜುನಾಥ, ಕೃಷ್ಣ, ರಮೇಶ ಮತ್ತು ಮಹೇಶ್   ಮಾಡಿರುತ್ತಾರೆ. (ಕೆ.ಎಸ್,ಎಚ್.ಎಚ್)

 

Leave a Reply

comments

Related Articles

error: