ಮೈಸೂರು

ಮನೆಗೆ ನುಗ್ಗಿ ಚಿನ್ನ ದೋಚಿದ ಕಳ್ಳರು

ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು  ಮನೆಯಲ್ಲಿದ್ದ ಚಿನ್ನ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣದ ಮಂಜುನಾಥ್ ಎಂಬವರ ಮನೆಗೆ ರಾತ್ರಿಯ ವೇಳೆ ನುಗ್ಗಿದ ಕಳ್ಳರು ಮನೆಯ ಬೀರುವಿನಲ್ಲಿರಿಸಲಾದ 25ಗ್ರಾಂ ಚಿನ್ನ, ಹಾಗೂ ಹತ್ತು ಸಾವಿರ ರೂ.ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: