ಕರ್ನಾಟಕ

ಟ್ರ್ಯಾಕ್ಟರ್-ಬುಲೇರೋ ಟೆಂಪೋ ನಡುವೆ ಅಪಘಾತ: ಐವರ ಸಾವು

ಬೆಳಗಾವಿ,ನ.8-ಕಾರ್ತಿಕ ಏಕಾದಶಿಯಂದು ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿ ತಾಲೂಕಿನ ಐವರು ಭಕ್ತರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಬಳಿ ನಡೆದಿದೆ.

ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ನಾಲ್ವರು ಹಾಗೂ ಹಂಗರಗಾ ಗ್ರಾಮದ ಒಬ್ಬರು ಮೃತಪಟ್ಟಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ.

ಗುರುವಾರ ರಾತ್ರಿ ಬುಲೇರೋ ಟೆಂಪೋ ವಾಹನದಲ್ಲಿ ಮಂಡೋಳಿಯಿಂದ ಪಂಢರಪುರಕ್ಕೆ ಹೊರಟ್ಟಿದ್ದರು. ಸಾಂಗೋಲ್ಯಾದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಹಾಗೂ ಬುಲೇರೋ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.

ಟ್ರಾಕ್ಟರ್ ಇಟ್ಟಿಗೆ ತುಂಬಿಕೊಂಡು ಹೊರಟಿತ್ತು.‌ ಹಿಂದಿನಿಂದ ಜೋರಾಗಿ ಬಂದ ಬುಲೇರೋ ವಾಹನ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬುಲೇರೋ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಮೃತರ ಮಾಹಿತಿ ಇನ್ನು ತಿಳಿದುಬಂದಿಲ್ಲ. (ಎಂ.ಎನ್)

Leave a Reply

comments

Related Articles

error: