ಮೈಸೂರು

ಆಹಾರ ಅರಸಿ ನಾಡಿಗೆ ಬಂದಿವೆ ಆನೆಗಳು

ಮಂಡ್ಯ ಜಿಲ್ಲೆಯ ಮಳವಳ್ಳಿ ಬಳಿ ಕಾಡಿನಿಂದ ನಾಡಿಗೆ ಏಳು ಆನೆಗಳಿರುವ ದಂಡೊಂದು ಬಂದಿದೆ.

ಮಂಡ್ಯ ಜಿಲ್ಲೆ, ಮಳವಳ್ಳಿ ಪಟ್ಟಣದ ಹೊರವಲಯದ ಕಣಗಲು ಹಳ್ಳದ ಬಳಿ ಇರುವ ನೀಲಗಿರಿ ತೋಪಿನಲ್ಲಿ ಆನೆಗಳ ದಂಡು ಬೀಡು ಬಿಟ್ಟಿದ್ದು,  ಅದರಲ್ಲಿ ಚಿಕ್ಕದೊಂದು ಮರಿಯೂ ಇದೆ ಎನ್ನಲಾಗಿದೆ. ಆನೆ ನೋಡಲು ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ದೌಡಾಯಿಸಿದ್ದು, ಯಾವುದೇ ಅನಾಹುತ ಆಗದಂತೆ ಎಚ್ಚರಿಕೆವಹಿಸಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಆನೆಗಳು ಪದೇ ಪದೇ ಆಹಾರವನ್ನು ಅರಸಿ ಪದೇ ಪದೇ ಬರುತ್ತಿದ್ದು, ಸ್ಥಳಿಯರನ್ನು ಕಂಗಾಲುಗೊಳಿಸಿದೆ.

Leave a Reply

comments

Related Articles

error: