ಪ್ರಮುಖ ಸುದ್ದಿ

ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮತ್ತಿತರ ಗಣ್ಯರು

ದೇಶ(ನವದೆಹಲಿ)ನ.8:-  ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಇಂದು  ಜನ್ಮದಿನದ ಸಂಭ್ರಮ. 92 ನೇ ವಸಂತಕ್ಕೆ ಕಾಲಿರಿಸಿದ್ದು,  ಅವರು 1927 ರಲ್ಲಿ ಕರಾಚಿಯಲ್ಲಿ ನ.8ರಂದು (ಪಾಕಿಸ್ತಾನ) ಜನಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಅಡ್ವಾಣಿ  ನಿವಾಸಕ್ಕೆ ಭೇಟಿ ನೀಡಿ  ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದರಲ್ಲದೇ ಉಭಯಕುಶಲೋಪರಿ ನಡೆಸಿದರು.

“ವಿದ್ವಾಂಸರು, ರಾಜಕಾರಣಿ ಮತ್ತು ಅತ್ಯಂತ ಗೌರವಾನ್ವಿತ ಎಲ್.ಕೆ.ಅಡ್ವಾಣಿ ಅವರ ಅಭೂತಪೂರ್ವ ಕೊಡುಗೆಯನ್ನು ಯಾವಾಗಲೂ ಭಾರತ  ನೆನಪಿನಲ್ಲಿರಿಸಿಕೊಳ್ಳಲಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಡ್ವಾಣಿ ಯವರು ಬಿಜೆಪಿಗೆ ಒಂದು ಸ್ಪಷ್ಟ ರೂಪ ಮತ್ತು ಶಕ್ತಿಯನ್ನು ನೀಡಲು ದಶಕಗಳಿಂದ ಶ್ರಮಿಸಿದ್ದಾರೆ.

“ಇಂದು ಬಿಜೆಪಿ ಭಾರತೀಯ ರಾಜಕೀಯದಲ್ಲಿ ಬಲವಾದ ಆಧಾರಸ್ತಂಭವಾಗಿ ಹೊರಹೊಮ್ಮಿದ್ದರೆ ಅದಕ್ಕೆ ಅಡ್ವಾಣಿ ಅವರ ಶ್ರಮ ಮತ್ತು ಅವರು ಸಿದ್ಧಪಡಿಸಿದ ನಿಸ್ವಾರ್ಥ ಕಾರ್ಯಕರ್ತರು ಕಾರಣ. ಅವರು ಯಾವಾಗಲೂ ಸಾಮಾಜಿಕ ಸೇವೆಯನ್ನೇ ಪ್ರಮುಖವಾಗಿರಿಸಿದ್ದಾರೆ.   ಪ್ರಜಾಪ್ರಭುತ್ವವನ್ನು ಭದ್ರಪಡಿಸುವ ವಿಷಯ ಬಂದಾಗ, ಅವರು ಇನ್ನೂ ಮುಂಚೂಣಿಯಲ್ಲಿದ್ದರು. ಮಂತ್ರಿಯಾಗಿಯೂ ಅವರು ಜಗತ್ತಿನಲ್ಲಿ ಮೆಚ್ಚುಗೆ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: