ಮೈಸೂರು

ಸರ್ಕಾರ ನಡೆಸುವ ಸ್ಪರ್ಧಾತ್ಮಕ ತರಬೇತಿ ಶಿಬಿರಗಳಲ್ಲಿ ಇಂದು ಪರಿಣಾಮಕಾರಿಯಾದ ತರಬೇತಿಗಳು ಸಿಗುತ್ತಿಲ್ಲ : ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಷಾದ

'ಐಎಎಸ್/ಕೆಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರಾರ್ಥಿಗಳ ಶುಭಹಾರೈಕೆ'

ಮೈಸೂರು,ನ.8:- ಸರ್ಕಾರ ನಡೆಸುವ ಸ್ಪರ್ಧಾತ್ಮ ತರಬೇತಿ ಶಿಬಿರಗಳಲ್ಲಿ ಇಂದು ಪರಿಣಾಮಕಾರಿಯಾದ ತರಬೇತಿಗಳು ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಷಾದ ವ್ಯಕ್ತಪಡಿಸಿದರು.

ಅವರಿಂದು ಕರಾಮುವಿ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನಡೆದ ಐಎಎಸ್/ಕೆಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರಾರ್ಥಿಗಳ ಶುಭಹಾರೈಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಸ್ ಎಸ್ ಎಲ್ ಸಿ, ಪಿಯುಸಿ ಪದವಿ ಮುಗಿಸಿದ ನಂತರ ಉದ್ಯೋಗಕ್ಕಾಗಿ ಹಂಬಲಿಸುತ್ತೇವೆ. ರಾಜ್ಯ ಸರ್ಕಾರ ಕೂಡ ತರಬೇತಿ ಶಿಬಿರಗಳನ್ನು ಸರ್ಕಾರದ ವತಿಯಿಂದ ನಡೆಸುತ್ತದೆ. ಖಾಸಗಿಯಾಗಿಯೂ ಕೂಡ ಇಂತಹ ಶಿಬಿರಗಳು ನಡೆಯುತ್ತವೆ. ಎರಡ್ಮೂರು ಕಡೆ ತರಬೇತಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಸರ್ಕಾರ ನಡೆಸತಕ್ಕ ಶಿಬಿರಗಳು ಮತ್ತು ಖಾಸಗಿಯಾಗಿ ನಡೆಸತಕ್ಕ ಶಿಬಿರಗಳ ವ್ಯತ್ಯಾಸ ಕಾಣ ಸಿಗುತ್ತದೆ. ಸರ್ಕಾರ ನಡೆಸುವ ಸ್ಪರ್ಧಾತ್ಮಕ ತರಬೇತಿ ಶಿಬಿರಗಳಲ್ಲಿ ಪರಿಣಾಮಕಾರಿಯಾದ ತರಬೇತಿ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಖಾಸಗಿ ಸಂಸ್ಥೆಗಳು ಹಣಸಂಪಾದನೆಗೋಸ್ಕರ ನಡೆಸುವಂಥದ್ದು. ಉಳ್ಳವರ ಮಕ್ಕಳು ನೂಕುನುಗ್ಗಲಿನಲ್ಲಿ ಹೋಗುತ್ತಾರೆ. ದೆಹಲಿ, ಹೈದ್ರಾಬಾದ್ ಹೀಗೆ ಅನೇಕ ಕಡೆಗಳಲ್ಲಿವೆ. ಬೆಂಗಳೂರಿನಲ್ಲಿಯೂ ನೂರಾರು ಹುಟ್ಟಿಕೊಂಡಿವೆ. ಆದರೆ ಫಲಿತಾಂಶ ಮಾತ್ರ ಪರಿಣಾಮಕಾರಿಯಾಗಿ ಬರುತ್ತಿಲ್ಲ. ಕರಾಮುವಿಯಲ್ಲಿ 40 ದಿನಗಳಲ್ಲಿ ಸಿಕ್ಕ ತರಬೇತಿ ಶಿಬಿರದಲ್ಲಿನ ಮಾಹಿತಿ, ಜ್ಞಾನ, ವಿಚಾರಧಾರೆ ಬೇರೆ ಕಡೆ ಸಿಗಲ್ಲ ಎಂಬ ಮಾತು ಕೇಳಿ ಬಂತು. ಇದು ಬಹಳ ಮುಖ್ಯ. ಎಲ್ಲ ವಿವಿಗಳು ಪದವಿಯನ್ನು ಕೊಡುತ್ತವೆ. ಕರಾಮುವಿ ಪದವಿ ಕೊಡತ್ತೆ. ಉದ್ಯೋಗ ಕೊಡುವುದು ವಿವಿಗಳಲ್ಲಿ ಕಡಿಮೆ. ಕರಾಮುವಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಉಚಿತವಾದ ಸೌಲಭ್ಯ, ಒಳ್ಳೆಯ ವಾತಾವರಣ, ರಾಜ್ಯದ ಮೂಲೆಮೂಲೆಗಳಿಂದ ಬಂದವರಿಗೆ ಹಾಸ್ಟೇಲ್ ವ್ಯವಸ್ಥೆ, ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರವಚನ ರೀತಿಯಲ್ಲಿ ಮಾತುಗಳನ್ನು ಕೇಳಲು ಅವಕಾಶ ಕಲ್ಪಿಸಿದೆ.  ಪದವಿ ನೀಡುವಂತಹ ವಿವಿ ಬದುಕು ರೂಪಿಸತಕ್ಕ, ಉದ್ಯೋಗ ನೀಡುವಂತಹ ತರಬೇತಿ ನೀಡುತ್ತಿರುವುದು ಕರಾಮುವಿಯಲ್ಲಿ ಮಾತ್ರ. ರಾಜ್ಯದಲ್ಲಿ ಬೇರೆಲ್ಲೂ ಇದನ್ನು ನೋಡಲು ಸಾಧ್ಯವಿಲ್ಲ ಎಂದರು.

ಜೈನಹಳ್ಳಿ ಸತ್ಯನಾರಾಯಣಗೌಡರ ಸಾರಥ್ಯದಲ್ಲಿ ಅದ್ಭುತವಾಗಿ ಶಿಬಿರ ನಡೆಯುತ್ತಿದೆ. ಕೇವಲ ಪದವೀಧರರಾದರೆ ಸಾಲದು. ಡಬ್ಬಲ್ ಡಿಗ್ರಿ, ತ್ರಿಬಲ್ ಡಿಗ್ರಿ, ಪಿಹೆಚ್.ಡಿ, ಮಾಡಿದರೆ ಸಾಲದು. ಸಮಾಜಮುಖಿ ಸೇವಾಮನೋಭಾವನೆಗೆ ಸಂಸ್ಕಾರ ಬೇಕು. ಕಲಿಯುವಂತದ್ದು ಬಹಳವಿದೆ. ನಿಮ್ಮಲ್ಲಿರುವ ಸಂಕುಚಿತ ಮನೋಭಾವನೆ ಹೋಗಬೇಕು. ಪರಿಶ್ರಮ, ಶ್ರದ್ಧೆಯಿಂದ ಕೆಲಸ ಮಾಡಿದರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ. ಜೀವನದಲ್ಲಿ ಏರಿಳಿತವಿರತ್ತೆ. ಧೃತಿಗೆಡದೆ ಮುನ್ನುಗ್ಗಿ, ವಿವೇಕಾನಂದರು ’ದುಡಿಯುವ ಕೈಗಳು, ನಮಿಸುವ ಕೈಗಳಿಗಿಂತ ಶ್ರೇಷ್ಠ’ ಎಂದಿದ್ದಾರೆ  . ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಎಷ್ಟು ಗಂಟೆ ಓದಿದ್ದೀರಿ ಎನ್ನುವುದಕ್ಕಿಂತ, ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎನ್ನುವುದು ಬಹಳ ಮುಖ್ಯ ಎಂದರು.

ಈ ಸಂದರ್ಭ ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವ ಪ್ರೊ.ರಮೇಶ್ ಬಿ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಸಹಾಯಕ ಪ್ರಾಧ್ಯಾಪಕರಾದ ಡಾ.ಶೈಲೇಸ್ ರಾಜೇ ಅರಸ್, ಪಾರ್ವತಿ ಜೋಷಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: